BIG NEWS: ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪ; 530 ಮಂದಿ ಸಾವು

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪದಿಂದಾಗಿ 530 ಜನ ಸಾವನ್ನಪ್ಪಿದ್ದಾರೆ . ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾಯಿತು.

ಜನ ಮಲಗಿದ್ದ ಸಮಯದಲ್ಲಿನ ಭೂಕಂಪದಿಂದ ಭಾರೀ ಸಂಖ್ಯೆಯಲ್ಲಿ ಜನರ ಸಾವಿಗೆ ಕಾರಣವಾಗಿದೆ. ಹಲವು ಕಟ್ಟಡಗಳು ನೆಲಸಮವಾಗಿದ್ದು , ಸೈಪ್ರಸ್ ಮತ್ತು ಈಜಿಪ್ಟ್ ದ್ವೀಪದವರೆಗೆ ಭೂಕಂಪನವಿತ್ತು.

ಸಿರಿಯಾದದಲ್ಲಿ ಭಾರೀ ಭೂಕಂಪದಿಂದ ಕನಿಷ್ಠ 245 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಕನಿಷ್ಠ 284 ಜನರು ಸಾವನ್ನಪ್ಪಿದ್ದಾರೆ. 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ . ನಾಪತ್ತೆಯಾಗಿರುವವರ ಹುಡುಕಾಟ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ. ಚಳಿಗಾಲದ ಹಿಮಪಾತದಿಂದ ರಕ್ಷಣೆಗೆ ಅಡ್ಡಿಯಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read