HomeLatest NewsBREAKING: ನೈಜೀರಿಯಾದಲ್ಲಿ ದೋಣಿ ಮುಳುಗಿ ಘೋರ ದುರಂತ: ಕನಿಷ್ಠ 26 ಜನ ಸಾವು

BREAKING: ನೈಜೀರಿಯಾದಲ್ಲಿ ದೋಣಿ ಮುಳುಗಿ ಘೋರ ದುರಂತ: ಕನಿಷ್ಠ 26 ಜನ ಸಾವು

ನೈಜೀರಿಯಾ: ದಕ್ಷಿಣ ನೈಜೀರಿಯಾದ ಕೋಗಿ ರಾಜ್ಯದ ನೈಜರ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 26 ಜನರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.

ಇಬಾಜಿಯಿಂದ ವ್ಯಾಪಾರಿಗಳನ್ನು ಎಡೋ ರಾಜ್ಯದ ಇಲುಶಿಯಲ್ಲಿರುವ ಮಾರುಕಟ್ಟೆಗೆ ದೋಣಿ ಸಾಗಿಸುತ್ತಿದ್ದಾಗ ನದಿಯಲ್ಲಿ ಉರುಳಿಬಿದ್ದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

“ಈ ದುರದೃಷ್ಟಕರ ಘಟನೆಯಲ್ಲಿ ಕನಿಷ್ಠ 26 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ” ಎಂದು ಕೋಗಿ ರಾಜ್ಯ ಮಾಹಿತಿ ಆಯುಕ್ತ ಕಿಂಗ್ಸ್ಲಿ ಫೆಮಿ ಫ್ಯಾನ್ವೊ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ತಿಂಗಳು, ನೈಜರ್ ರಾಜ್ಯದಲ್ಲಿ ಜನದಟ್ಟಣೆಯ ದೋಣಿಯೊಂದು ಮರದ ಬುಡಕ್ಕೆ ಡಿಕ್ಕಿ ಹೊಡೆದು ಕನಿಷ್ಠ 60 ಜನರು ಮುಳುಗಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular