HomeIndiaಪ್ರವಾಸಕ್ಕೆ ತೆರಳ್ತಿದ್ದ ಶಾಲ್ ಬಸ್ ಬ್ರೇಕ್ ಫೇಲ್ಯೂರ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು....!

ಪ್ರವಾಸಕ್ಕೆ ತೆರಳ್ತಿದ್ದ ಶಾಲ್ ಬಸ್ ಬ್ರೇಕ್ ಫೇಲ್ಯೂರ್; ಕೂದಲೆಳೆ ಅಂತರದಲ್ಲಿ ಮಕ್ಕಳು ಪಾರು….!

ಪ್ರವಾಸಕ್ಕೆ ತೆರಳುತ್ತಿದ್ದ ಮಹಾರಾಷ್ಟ್ರದ ಖಾಸಗಿ ಶಾಲೆಯೊಂದರ ಬಸ್ ಬ್ರೇಕ್ ಫೇಲ್ಯೂರ್ ಆಗಿ ಕೂದಲೆಳೆ ಅಂತರದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ.

ವಿದ್ಯಾರ್ಥಿಗಳನ್ನು ಶಾಲಾ ಪಿಕ್ನಿಕ್‌ಗಾಗಿ ಪುಣೆ ಜಿಲ್ಲೆಯ ಬಾರಾಮತಿಯ ಮೋರ್ಗಾಂವ್‌ಗೆ ಕರೆದೊಯ್ಯಲಾಗುತ್ತಿತ್ತು. ಪುಣೆಯ ಭೋರ್‌ನಲ್ಲಿ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ 34 ವಿದ್ಯಾರ್ಥಿಗಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ರೇಕ್ ಕೆಲಸ ಮಾಡುತ್ತಿಲ್ಲ ಎಂದು ತಿಳಿದ ಕೂಡಲೇ ಬಸ್ ಚಾಲಕ ರಸ್ತೆಯಲ್ಲಿದ್ದ ಜನರನ್ನು ಎಚ್ಚರಿಸಿ ಚಲಿಸುತ್ತಿದ್ದ ವಾಹನದಿಂದ ಜಿಗಿದಿದ್ದಾನೆ. ನಂತರ ಬಸ್ ಟೈರ್ ಒಂದರ ಬಳಿ ಕಲ್ಲು ಇಟ್ಟು ನಿಲ್ಲಿಸಿದ್ದಾರೆ.

ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular