
9 ವರ್ಷದ ಪವನ್ ಮೊಸಳೆ ದಾಳಿಗೊಳಗಾದ ಬಾಲಕ. ಕುಟುಂಬದವರ ಜೊತೆಗೆ ಬಾಲಕ ನದಿಗೆ ತೆರಳಿದ್ದ. ಈ ವೇಳೆ ಮೊಸಳೆ ಬಾಲಕನ ಮೇಲೆ ಏಕಾಏಕಿ ದಾಳಿ ನಡೆಸಿದೆ. ತಕ್ಷಣ ಮೊಸಳೆಯಿಂದ ಬಾಲಕನನ್ನು ಕುಟುಂಬ ಸದಸ್ಯರು ರಕ್ಷಿಸಿದ್ದಾರೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೊರ್ತಕುಂದದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ಬಾಲಕ ಬಂದಿದ್ದ. ಈ ವೇಳೆ ನದಿಗೆ ತೆರಳಿದ್ದ ವೇಳೆ ಮೊಸಳೆ ದಾಳಿ ಮಾಡಿದೆ. ಸಧ್ಯ ಬಾಲಕನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

