HomeKarnatakaBIG NEWS: ಮೇಕೆದಾಟು ಯೋಜನೆಗಾಗಿ ರೈತರ ಪ್ರತಿಭಟನೆ; ನಿಷೇಧಾಜ್ಞೆ ಜಾರಿ

BIG NEWS: ಮೇಕೆದಾಟು ಯೋಜನೆಗಾಗಿ ರೈತರ ಪ್ರತಿಭಟನೆ; ನಿಷೇಧಾಜ್ಞೆ ಜಾರಿ

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಇಂದು ರಾಮನಗರ ಜಿಲ್ಲೆಯ ಸಂಗಮದ ಬಳಿ ರೈತರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ಮುಂಜಾಗೃತಾ ಕ್ರಮವಾಗಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ವಿವಿಧ ರೈತಪರ ಸಂಘಟನೆಗಳು ಇಂದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿ ಗುದ್ದಲಿ ಪೂಜೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿ ಗೊಳಿಸಿದ್ದಾರೆ.

ಒಂದೆಡೆ ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಮೇಕೆದಾಟು ಹೋರಾಟ ಸಮಿತಿ ದೆಹಲಿ ಚಲೋ ಆರಂಭಿಸಿದ್ದು, ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಆರಂಭಿಸಲಿದೆ. ಇದರ ಬೆನ್ನಲ್ಲೇ ವಿವಿಧ ರೈತ ಸಂಘಟನೆಗಳು ಸಂಗಮದ ಬಳಿ ಗುದ್ದಲಿ ಪೂಜೆ ನಡೆಸಲು ಸಿದ್ಧತೆ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular