ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ವಿಚಾರವಾಗಿ ಮಾತನಾಡಿರುವ
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಮೇಶ್ ಜಾರಕಿಹೊಳಿ ನಡೆಸುತ್ತಿದ್ದ ಕಳ್ಳಬಟ್ಟಿ ಸಾರಾಯಿ ದಂಧೆ ಬಗ್ಗೆ ಫೋಟೋ, ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
1985ರಲ್ಲಿ ಡಿಕೆಶಿ ಹರಿದ ಚಪ್ಪಲಿ ಹಾಕುತ್ತಿದ್ದ ಡಿಕೆಶಿ ಬಳಿಕ ಅಕ್ರಮವಾಗಿ ಆಸ್ತಿ, ಹಣ ಲೂಟಿ ಮಾಡಿ ಆಗರ್ಭ ಶ್ರೀಮಂತರಾದರು ಎಂದು ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಈ ಹಿಂದೆ ರಮೇಶ್ ಜಾರಕಿಹೊಳಿ ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದರು. ಈ ಬಗ್ಗೆ ದಾಖಲೆಗಳಿವೆ ಎಂದು ಫೋಟೋ ಬಿಡುಗಡೆ ಮಾಡಿದ್ದಾರೆ.
ಆಸ್ತಿ ಖರೀದಿಗೆ ಜಾರಕಿಹೊಳಿ ಕುಟುಂಬದ ಅನುಮತಿ ಪಡೆಯಬೇಕಿತ್ತು. ಅನುಮತಿ ಪಡೆಯದಿದ್ದರೆ ಅಟ್ರಸಿಟಿ ರೇಪ್ ಪ್ರಕರಣ ದಾಖಲಿಸುತ್ತಿದ್ದರು. ಸುಮಾರು 300 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
1994ರಲ್ಲಿ ಗೋಕಾಕ್ ಸರ್ಕಾರಿ ಮಿಲ್ ನಲ್ಲಿ ಹತ್ಯಾಕಾಂಡ ನಡೆದಿತ್ತು. ಹತ್ಯಾಕಾಂಡದ ನೇತೃತ್ವ ವಹಿಸಿದ್ದೇ ಶಾಸಕ ರಮೇಶ್ ಜಾರಕಿಹೊಳಿ ಎಂದು ಎಂ.ಲಕ್ಷ್ಮಣ್ ಸಾಲು ಸಾಲು ಆರೋಪ ಮಾಡಿದ್ದಾರೆ.