HomeKarnatakaBIG NEWS: ಅಲೆಮಾರಿಗಳಂತೆ ಕ್ಷೇತ್ರ ಹುಡುಕುತ್ತಾ ಹತಾಶರಾಗಿದ್ದಾರೆ; ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಈಶ್ವರಪ್ಪ

BIG NEWS: ಅಲೆಮಾರಿಗಳಂತೆ ಕ್ಷೇತ್ರ ಹುಡುಕುತ್ತಾ ಹತಾಶರಾಗಿದ್ದಾರೆ; ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ ಈಶ್ವರಪ್ಪ

ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರಗಳನ್ನು ಬದಲಿಸುತ್ತಾ ಹತಾಶರಾಗುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಕ್ಷೇತ್ರ ಹುಡುಕಲಿ ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಹತಾಶರಾಗುತ್ತಿರುವುದು ಕಂಡುಬರುತ್ತಿದೆ. ಅಲೆಮಾರಿಗಳಂತೆ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಿದರು.

ಬಾದಾಮಿ ದೂರ ಎಂದು ಕೋಲಾರಕ್ಕೆ ಯಾಕೆ ಹೋಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ. ಅದು ನಿಮ್ಮದೇ ಕ್ಷೇತ್ರ. ಅನೇಕ ಬಾರಿ ಅಲ್ಲಿಂದ ಗೆದ್ದವರು. ಅಲ್ಲಿ ಯಾಕೆ ಹೋಗುತ್ತಿಲ್ಲ. ಯಾಕೆ ಕೋಲಾರ ಹುಡುಕಿಕೊಂಡು ಹೊರಟಿದ್ದೀರಿ ? ಅಲ್ಲಿನ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು. ಸೋಲುವ ಭೀತಿಯಿಂದ ಅಲೆದಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular