HomeKarnatakaBIG NEWS: ಮೇಕೆದಾಟು ಯೋಜನೆಗೆ ಜನವರಿ 31ರಿಂದ ದೆಹಲಿ ಚಲೋ ಹೋರಾಟ

BIG NEWS: ಮೇಕೆದಾಟು ಯೋಜನೆಗೆ ಜನವರಿ 31ರಿಂದ ದೆಹಲಿ ಚಲೋ ಹೋರಾಟ

ರಾಮನಗರ: ಮೇಕೆದಾಟು ಯೋಜನೆಗೆ ಆಗ್ರಹಿಸಿ ದೆಹಲಿ ಚಲೋ ಹೋರಾಟ ನಡೆಸುವುದಾಗಿ ಮೇಕೆದಾಟು ಹೋರಾಟ ಸಮಿತಿ ತಿಳಿಸಿದೆ.

ರಾಮನಗರದಲ್ಲಿ ಮೇಕೆದಾಟು ಹೋರಾಟ ಸಮಿತಿ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದು, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನವರಿ 31ರಂದು ಬೆಂಗಳೂರಿನಿಂದ ದೆಹಲಿ ಚಲೋ ಆರಂಭಿಸುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿ 1ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಯೋಜನೆಗಾಗಿ ಧರಣಿ ನಡೆಸಲಾಗುವುದು. ಧರಣಿ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆ ಜಾರಿಗಾಗಿ ಮನವಿ ಮಾಡಲಾಗುವುದು ಎಂದು ತಿಳಿಸಿದರು. ನಮ್ಮ ಹೋರಾಟಕ್ಕೆ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಸಮಿತಿ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular