ನ್ಯೂಯಾರ್ಕ್: ಉಬರ್ ಈಟ್ಸ್‌ನ ಆಹಾರ ವಿತರಣಾ ಏಜೆಂಟ್ ಆರ್ಡರ್ ಅನ್ನು ತಲುಪಿಸುವ ಪ್ರಯತ್ನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟವನ್ನು ಅಡ್ಡಿಪಡಿಸಿದ ವಿಡಿಯೋ ವೈರಲ್ ಆಗಿದೆ. ಫಾಕ್ಸ್‌ಸ್ಪೋರ್ಟ್ಸ್ ಪ್ರಕಾರ, ಲೊಯೊಲಾ ಚಿಕಾಗೊ ಮತ್ತು ಡುಕ್ವೆಸ್ನೆ ನಡುವಿನ ಅಟ್ಲಾಂಟಿಕ್ 10 ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದೆ.
ಮೆಕ್‌ಡೊನಾಲ್ಡ್ಸ್ ಅನ್ನು ಅಲ್ಲಿ ಯಾರೋ ಆರ್ಡರ್ ಮಾಡಿದ್ದರು. ಅದು ಯಾರು ಎಂದು ಡೆಲವರಿ ಬಾಯ್ಗೆ ತಿಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಆಟ ನಡೆಯುತ್ತಿರುವಾಗಲೇ ನೇರವಾಗಿ ಕೋರ್ಟ್ ಒಳಗೆ ನುಗ್ಗಿದ್ದಾನೆ! ಆರ್ಡರ್ ಮಾಡಿದವನ್ನು ಹುಡುಕುತ್ತಿದ್ದ ಕಾರಣ ಆಟಕ್ಕೆ ತೊಂದರೆಯಾಯಿತು. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಪ್ರಕಾರ, ಡೆಲಿವರಿ ಫುಡ್ ಏಜೆಂಟ್ ಸುಮಾರು 10 ನಿಮಿಷಗಳ ಕಾಲ ಅಲೆದಾಡಿದ್ದಾನೆ. ಅತ ತನಗೆ ಬೇಕಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ.
ಈ ಹಿನ್ನೆಲೆಯಲ್ಲಿ ಸಂಘಟಕರು ಆಟವನ್ನು ಸಂಕ್ಷಿಪ್ತವಾಗಿ ವಿರಾಮಗೊಳಿಸಬೇಕಾಯಿತು. ಡೆಲಿವರಿ ಬಾಯ್ ಅನ್ನು ಮೈದಾನಕ್ಕೆ ಹೇಗೆ ಬಿಟ್ಟರು ಎಂಬ ಬಗ್ಗೆ ಕ್ರೀಡಾ ಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಡೆಲಿವರಿ ಏಜೆಂಟ್‌ನ ಸಮರ್ಪಣೆಯನ್ನು ಶ್ಲಾಘಿಸುತ್ತಿದ್ದಾರೆ. ಆಟದ ಸಮಯದಲ್ಲಿನ ಭದ್ರತೆಯನ್ನು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.
This is true. He wandered around for 10 minutes but ultimately delivered the order https://t.co/lQAWz8BAwR pic.twitter.com/iW1PLB4akb
— connor newell (@cnewell15) January 26, 2023

