ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಸಿಐಡಿ ತನಿಖಾಧಿಕಾರಿ ಶಂಕರೇಗೌಡ ವಿರುದ್ಧ ಹಣದ ಬೇಡಿಕೆ ಆರೋಪ ಮಾಡಲಾಗಿದೆ.
ಪಿಎಸ್ಐ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ವಿಡಿಯೋ ಬಿಡುಗಡೆ ಮಾಡಿ ಶಂಕರೇಗೌಡ ವಿರುದ್ಧ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿದ್ದಾರೆ. 3 ಕೋಟಿ ಪೈಕಿ 76 ಲಕ್ಷ ರೂಪಾಯಿ ಹಣ ತಲುಪಿಸಿರುವುದಾಗಿ ರುದ್ರಗೌಡ ಪಾಟೀಲ್ ತಿಳಿಸಿದ್ದು, ಸಿಐಡಿ ತನಿಖಾಧಿಕಾರಿ ಕೇಳಿರುವ ಆಡಿಯೋ ದಾಖಲೆ ನನ್ನ ಬಳಿ ಇದೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.