HomeKarnatakaBIG NEWS: ರಾಜಕಾಲುವೆಗಳನ್ನು ನುಂಗಿ ಹಾಕಿದವರೇ ಕಾಂಗ್ರೆಸ್ ನವರು; ಬೆಂಗಳೂರನ್ನು ಹಾಳು ಮಾಡಿದವರೇ ಕೈ ನಾಯಕರು;...

BIG NEWS: ರಾಜಕಾಲುವೆಗಳನ್ನು ನುಂಗಿ ಹಾಕಿದವರೇ ಕಾಂಗ್ರೆಸ್ ನವರು; ಬೆಂಗಳೂರನ್ನು ಹಾಳು ಮಾಡಿದವರೇ ಕೈ ನಾಯಕರು; ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್. ಭ್ರಷ್ಟಾಚಾರದಲ್ಲಿಯೇ ಪಿ ಹೆಚ್ ಡಿ ಮಾಡಿದವರು ಕಾಂಗ್ರೆಸ್ ನಾಯಕರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ 300 ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರು ಒಂದು ಕಡೆ ಪ್ರತಿಭಟನೆ ಮಾಡಿದರೇ ಯಾರೂ ಹೋಗಲ್ಲ, ಈಗ 300 ಕಡೆ ಮಾಡಿದ್ದಾರೆ. ಆದರೂ ಜನ ಹೋಗುವುದಿಲ್ಲ ಎಂದು ಟಾಂಗ್ ನೀಡಿದರು.

ರಾಜಕಾಲುವೆಯನ್ನೇ ನುಂಗಿ ಹಾಕಿದವರು ಕಾಂಗ್ರೆಸ್ ನವರು. ತಮ್ಮ ಹಗರಣಗರಣಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತವನ್ನೇ ಮುಚ್ಚಿಸಿ ಭ್ರಷ್ಟಾಚಾರಕ್ಕೆ ಕೊಡುಗೆ ಕೊಟ್ಟವರು. ಬೆಂಗಳೂರನ್ನು ಹಾಳು ಮಾಡಿದ್ದೇ ಕಾಂಗ್ರೆಸ್ ನಾಯಕರು. ಈಗ ತಮ್ಮ ತಪ್ಪು ಹೊರಬರಬಾರದು ಎಂದು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular