HomeIndiaಯುಎಇ ರಾಯಭಾರಿಗೆ 20 ಪುಷ್​ಅಪ್​ ಮಾಡಿಸಿದ ಮಿಲಿಂದ್ ಸೋಮನ್.....​!

ಯುಎಇ ರಾಯಭಾರಿಗೆ 20 ಪುಷ್​ಅಪ್​ ಮಾಡಿಸಿದ ಮಿಲಿಂದ್ ಸೋಮನ್…..​!

ಟಾಪ್​ ಮಾಡೆಲ್​ ಮಿಲಿಂದ್ ಸೋಮನ್ ಮತ್ತು ಭಾರತದಲ್ಲಿನ ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಮುಂಬೈನಲ್ಲಿ ಪುಷ್ಅಪ್ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಮಿಲಿಂದ್ ಅವರು ಮುಂಬೈ ಮ್ಯಾರಥಾನ್‌ಗೆ ಮುನ್ನ ಪುಶ್‌ಅಪ್‌ಗಳನ್ನು ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಕುರಿತು ವಿವರಗಳನ್ನು ಬಹಿರಂಗಪಡಿಸಿದ ನಟ, “ಮುಂಬೈ ಮ್ಯಾರಥಾನ್‌ನಲ್ಲಿ ಚಿತ್ರವನ್ನು ತೆಗೆದುಕೊಳ್ಳುವ ಮೊದಲು ಯುಎಇ ರಾಯಭಾರಿ ಅಬ್ದುಲ್ನಾಸರ್ ಅಲ್ಶಾಲಿ ಅವರೊಂದಿಗೆ 20 ಪುಷ್ಅಪ್‌ಗಳು ಎಂದು ಶೀರ್ಷಿಕೆ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಜನರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕು ಎಂದರೆ ಏಕೈಕ ಆಸಕ್ತಿದಾಯಕ ಮಾರ್ಗವಾಗಿರುವುದು ಪುಷ್ಅಪ್​” ಎಂದಿದ್ದಾರೆ ಮಿಲಿಂದ್​.

ಮಿಲಿಂದ್ ಮತ್ತು ಅಬ್ದುಲ್ನಾಸರ್ ಪುಶ್-ಅಪ್ ವ್ಯಾಯಾಮವನ್ನು ಸಂಪೂರ್ಣವಾಗಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಈ ವೀಡಿಯೊವನ್ನು ನೋಡಿದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸೆಲ್ಫಿಗಾಗಿ ಪುಶ್‌ಅಪ್ ಮಾಡುವ ಕಲ್ಪನೆಯಿಂದ ಆಸಕ್ತಿ ಹೊಂದಿರುವಂತೆ ಕಾಣಿಸುತ್ತದೆ ಎಂದು ಮಿಲಿಂದ್​ ಬರೆದುಕೊಂಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿವೆ.

For Latest News Updates, Join Our Whatsapp Community🚩
RELATED ARTICLES

Most Popular