HomeKarnatakaBIG NEWS: ಬಾನೆಟ್ ಮೇಲೆ ಯುವಕ ಬಿದ್ದರೂ ಕಾರು ನಿಲ್ಲಿಸದೇ 2 ಕಿ.ಮೀ. ಎಳೆದೊಯ್ದ ಚಾಲಕಿ

BIG NEWS: ಬಾನೆಟ್ ಮೇಲೆ ಯುವಕ ಬಿದ್ದರೂ ಕಾರು ನಿಲ್ಲಿಸದೇ 2 ಕಿ.ಮೀ. ಎಳೆದೊಯ್ದ ಚಾಲಕಿ

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬೈಕ್ ಚಾಲಕನೊಬ್ಬ ವೃದ್ಧ ಕಾರು ಚಾಲಕನನ್ನು ಒಂದು ಕಿ.ಮೀ.ವರೆಗೂ ಎಳೆದೊಯ್ದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ.

ಕಾರು ಚಾಲಕಿಯೊಬ್ಬರು ಯುವಕನೊಬ್ಬ ಬಾನೇಟ್ ಮೇಲೆ ಬಿದ್ದರೂ ಕೇರ್ ಮಾಡದೇ ಎರಡು ಕಿ.ಮೀ. ವರೆಗೆ ಕಾರು ಚಲಾಯಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ಉಳ್ಳಾಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಉಳ್ಳಾಲ ರಸ್ತೆ ಸಿಗ್ನಲ್ ನಲ್ಲಿ ರೆಡ್ ಸಿಗ್ನಲ್ ಇದ್ದರೂ ಪ್ರಿಯಾಂಕಾ ಎಂಬ ಮಹಿಳೆ ತನ್ನ ಕಾರನ್ನು ತಂದು ಅಡ್ಡ ನಿಲ್ಲಿಸಿದ್ದರು. ಇದಕ್ಕೆ ಯುವಕ ದರ್ಶನ್ ಎಂಬಾತ ಮಹಿಳೆಯನ್ನು ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಜಗಳವಾಗಿದ್ದು, ಯುವಕ ಮಹಿಳೆಯ ಕಾರಿನ ಮುಂದೆ ಬರುತ್ತಿದ್ದಂತೆ ಮಹಿಳೆ ಕಾರನ್ನು ಚಲಾಯಿಸಿದ್ದಾರೆ. ಯುವಕ ಕಾರಿನ ಬಾನೆಟ್ ಮೇಲೆ ಹತ್ತಿ ಕಾರು ನಿಲ್ಲಿಸುವಂತೆ ಹೇಳುತ್ತಿದ್ದರೂ ಮಹಿಳೆ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.

ಯುವಕನ ಸ್ನೇಹಿತರು ಕಾರನ್ನು ಹಿಂಬಾಲಿಸಿ ಕಾರಿನ ಗಾಜು ಒಡೆಯುತ್ತಿದ್ದಂತೆ ಮಹಿಳೆ ಕಾರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಸಿಸಿ ಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಯುವಕ ಕಾರಿನ ಬಾನೆಟ್ ಮೇಲೆ ಹತ್ತಲು, ಬಾನೆಟ್ ಮೇಲೆ ವ್ಯಕ್ತಿ ಇದ್ದರೂ ಕಾರು ಚಾಲಕಿ ಡ್ರೈವ್ ಮಾಡಿಕೊಂಡು ಹೋಗಲು ನಿಖರ ಕಾರಣವೇನು ತಿಳಿದುಬಂದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular