HomeIndiaBIG NEWS: ಶಬರಿಮಲೆ ದೇಗುಲದಲ್ಲಿ ಭಕ್ತರ ತಳ್ಳಾಡಿದ ಸಿಬ್ಬಂದಿ ವಿಡಿಯೋ ವೈರಲ್; ಸೂಕ್ತ ಕ್ರಮ ಕೈಗೊಳ್ಳಲು...

BIG NEWS: ಶಬರಿಮಲೆ ದೇಗುಲದಲ್ಲಿ ಭಕ್ತರ ತಳ್ಳಾಡಿದ ಸಿಬ್ಬಂದಿ ವಿಡಿಯೋ ವೈರಲ್; ಸೂಕ್ತ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ

ಶಬರಿಮಲೆ ದೇಗುಲದಲ್ಲಿ ಭಕ್ತರನ್ನು ಸಿಬ್ಬಂದಿಯೊಬ್ಬರು ಹಲ್ಲೆ ನಡೆಸುವ ರೀತಿಯಲ್ಲಿ ತಳ್ಳಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ.

ಜನವರಿ 14ರಂದು ಈ ಘಟನೆ ನಡೆದಿದ್ದು, ಅರುಣ್ ಎಂಬ ಸಿಬ್ಬಂದಿ ಭಕ್ತರನ್ನು ಹಲ್ಲೇ ನಡೆಸುವ ರೀತಿಯಲ್ಲಿ ತಳ್ಳಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಈ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ ದೇವಸ್ಥಾನಕ್ಕೆ ಭಕ್ತರು ನೀಡಿರುವ ಕಾಣಿಕೆ ಮತ್ತು ಇತರೆ ದೇಣಿಗೆ ಎಣಿಕೆ ವೇಳೆ ಯಾವುದಾದರೂ ಲೋಪ ಸಂಭವಿಸಿದೆಯೇ ಎಂಬುದರ ಕುರಿತೂ ಮಾಹಿತಿ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular