HomeIndiaಬಿಹಾರದಲ್ಲಿ ಲಿಕ್ಕರ್ ಮಾಫಿಯಾ ಬೇಧಿಸಲು ತೆರಳಿದ್ದ ಪೊಲೀಸ್ ಹತ್ಯೆ

ಬಿಹಾರದಲ್ಲಿ ಲಿಕ್ಕರ್ ಮಾಫಿಯಾ ಬೇಧಿಸಲು ತೆರಳಿದ್ದ ಪೊಲೀಸ್ ಹತ್ಯೆ

ಬಿಹಾರದಲ್ಲಿ ಮದ್ಯ ನಿಷೇಧವಿದ್ರೂ ರಾಜ್ಯದಲ್ಲಿ ಲಿಕ್ಕರ್ ಮಾಫಿಯಾ ಜೋರಾಗಿದೆ. ಮುಜಾಫರ್‌ಪುರದಲ್ಲಿ ಬುರ್ಹಿ ಗಂಡಕ್ ನದಿಯ ದಡದಲ್ಲಿ ನಡೆಯುತ್ತಿದ್ದ ಲಿಕ್ಕರ್ ಮಾಫಿಯಾ ಬೇಧಿಯಲು ತೆರಳಿದ್ದ ಕಾನ್ಸ್ ಟೇಬಲ್ ನ ದಂಧೆಕೋರರು ಹತ್ಯೆ ಮಾಡಿದ್ದಾರೆ.

ಇಬ್ಬರು ಶಂಕಿತರನ್ನು ಹಿಂಬಾಲಿಸುವಾಗ ಕಾನ್ಸ್ ಟೇಬಲ್ ದೀಪಕ್ ಕುಮಾರ್ (23) ಅವರನ್ನು ಎಳೆದುಕೊಂಡು ಹೋಗಿ ನಂತರ ನದಿಗೆ ಎಸೆದು ಮುಳುಗಿಸಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತ್ತೊಂದೆಡೆ ಪಾಟ್ನಾದಲ್ಲಿ, ಲೋದಿಪುರ ಪಿಡಬ್ಲ್ಯೂಡಿ ಕ್ವಾರ್ಟರ್ಸ್‌ನಲ್ಲಿ ನಡೆದ ಪಾರ್ಟಿಯಲ್ಲಿ ಮದ್ಯ ಸೇವಿಸಿದ 25 ರಿಂದ 30 ಜನರ ಗುಂಪು ನಡೆಸಿದ ಹಲ್ಲೆಯಲ್ಲಿ ಪೊಲೀಸ್ ತಂಡದ ನಾಲ್ವರು ಗಾಯಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular