ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
2011ರಲ್ಲಿ ಮಧು ಬಂಗಾರಪ್ಪ ಅವರು ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ರಾಜೇಶ್ ಎಕ್ಸ್ ಪೋರ್ಟ್ ಎಂಬ ಕಂಪನಿಗೆ 6.60 ಕೋಟಿ ರೂಪಾಯಿಗಳಿಗೆ ಚೆಕ್ ನೀಡಿದ್ದರು.
ಈ ಚೆಕ್ ಬ್ಯಾಂಕಿನಲ್ಲಿ ಅಮಾನ್ಯವಾದ ಕಾರಣ ರಾಜೇಶ್ ಎಕ್ಸ್ ಪೋರ್ಟ್ ಕಂಪನಿಯು ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಂಗಳವಾರದಂದು ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ.