
2011ರಲ್ಲಿ ಮಧು ಬಂಗಾರಪ್ಪ ಅವರು ಆಕಾಶ್ ಆಡಿಯೋ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ರಾಜೇಶ್ ಎಕ್ಸ್ ಪೋರ್ಟ್ ಎಂಬ ಕಂಪನಿಗೆ 6.60 ಕೋಟಿ ರೂಪಾಯಿಗಳಿಗೆ ಚೆಕ್ ನೀಡಿದ್ದರು.
ಈ ಚೆಕ್ ಬ್ಯಾಂಕಿನಲ್ಲಿ ಅಮಾನ್ಯವಾದ ಕಾರಣ ರಾಜೇಶ್ ಎಕ್ಸ್ ಪೋರ್ಟ್ ಕಂಪನಿಯು ಮಧು ಬಂಗಾರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಂಗಳವಾರದಂದು ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ.

