HomeKarnatakaBIG NEWS: ಮೇದಿನಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾದ ಮಹಿಳೆ

BIG NEWS: ಮೇದಿನಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾದ ಮಹಿಳೆ

ಮೈಸೂರು: ಮಹಿಳೆಯೋರ್ವರ ಮೃತದೇಹ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ಮೇದಿನಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಭಾಗ್ಯ ಮೃತ ಮಹಿಳೆ.

ಪತಿ ಶಂಕರ್ ಅತ್ತೆ ಸಿದ್ದಮ್ಮ, ಅತ್ತಿಗೆ ನೀಲ, ಅತ್ತಿಗೆ ಪತಿ ಸಿದ್ದಪ್ಪ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಭಾಗ್ಯಾ ಪೋಷಕರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

15 ವರ್ಷಗಳ ಹಿಂದೆ ಶಂಕರ್ ಎಂಬಾತನ ಜೊತೆ ಭಾಗ್ಯ ವಿವಾಹವಾಗಿದ್ದರು. ಮದುವೆಯಾದ ದಿನದಿಂದಲೂ ಪತಿ ಹಾಗೂ ಮನೆಯವರು ನಿರಂತರ ಕಿರುಕುಳ ನೀಡುತ್ತಿದ್ದರು. ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಭಾಗ್ಯಾಗಿಳೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ಇದೀಗ ಭಾಗ್ಯಾ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಘಟನೆ ಬಳಿಕ ಪತಿ, ಅತ್ತೆ, ಅತ್ತಿಗೆ, ಭಾವ ಎಲ್ಲರೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular