HomeCrimeದೇಗುಲದಲ್ಲಿ ವಿಗ್ರಹ ಕದ್ದ ಆರೋಪ; ಯುವಕನನ್ನು ಮರಕ್ಕೆ ತಲೆಕೆಳಕಾಗಿ ನೇತುಹಾಕಿ ಥಳಿತ

ದೇಗುಲದಲ್ಲಿ ವಿಗ್ರಹ ಕದ್ದ ಆರೋಪ; ಯುವಕನನ್ನು ಮರಕ್ಕೆ ತಲೆಕೆಳಕಾಗಿ ನೇತುಹಾಕಿ ಥಳಿತ

rajasthan: youth hanged from tree, brutally thrashed for desecrating temple idolsದೇಗುಲದಲ್ಲಿದ್ದ ವಿಗ್ರಹಗಳನ್ನು ವಿರೂಪಗೊಳಿಸಿದ್ದಾನೆಂದು ಆರೋಪಿಸಿ ರಾಜಸ್ಥಾನದಲ್ಲಿ ಯುವಕನನ್ನ ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಲಾಗಿದೆ. ಜುಂಜುನು ಜಿಲ್ಲೆಯ ಉದಯಪುರವತಿ ಪಟ್ಟಣದಲ್ಲಿ ಯುವಕನೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಾಹಿತಿಯ ಪ್ರಕಾರ, ಉದಯಪುರವತಿ ಪಟ್ಟಣದ ವಾರ್ಡ್ ನಂ. 18 ರಲ್ಲಿ, ಮದ್ಯಪಾನ ಮಾಡಿದ ಯುವಕನೊಬ್ಬ ಶಿವನ ದೇವಸ್ಥಾನದಲ್ಲಿ (ಉದಯಪುರವತಿ ಶಿವ ಮಂದಿರ) ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಸ್ಥಳೀಯರು ಯುವಕನನ್ನು ಹಿಡಿದು ಮರಕ್ಕೆ ನೇತು ಹಾಕಿ ಥಳಿಸಿದ್ದಾರೆ. ಯುವಕ ಸಂಪೂರ್ಣವಾಗಿ ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದ ಎನ್ನಲಾಗಿದೆ. ಈತ ನಿತ್ಯ ಗಲಾಟೆ ಮಾಡಿ ಶಾಂತಿ ಕದಡುವ ಇಂತಹ ಕೃತ್ಯಗಳನ್ನು ಮಾಡುತ್ತಾನೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಈ ವಿಷಯವನ್ನು ಅರಿತುಕೊಂಡು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಯುವಕನಿಗೂ ಚಿಕಿತ್ಸೆ ನೀಡಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular