HomeAutoರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ರೂಟಲ್ಲಿ ಬಂದ ಪೊಲೀಸ್ ವಾಹನ ಕಾರ್ ಗೆ ಡಿಕ್ಕಿ; 6 ತಿಂಗಳ ಹಸುಗೂಸು ಸಾವು

ರಾಂಗ್ ಸೈಡ್ ನಲ್ಲಿ ಹೋಗುತ್ತಿದ್ದ ಪೊಲೀಸ್ ವಾಹನ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಗುಡಗಾಂವ್-ಫರೀದಾಬಾದ್ ರಸ್ತೆಯಲ್ಲಿ ನಡೆದಿದೆ. ಘಾಟಾ ಗ್ರಾಮದ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಾಟಾ ಗ್ರಾಮದ ಬಳಿ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಈ ಬಗ್ಗೆ ಪೊಲೀಸ್ ತಂಡಕ್ಕೆ ತುರ್ತು ಕರೆ ಬಂದ ನಂತರ ಗ್ವಾಲ್‌ಪಹಾರಿ ಪೊಲೀಸ್ ಪೋಸ್ಟ್ ನ ತುರ್ತು ಪ್ರತಿಕ್ರಿಯೆ ವಾಹನ (ಇಆರ್‌ವಿ) ತೆರಳುತ್ತಿತ್ತು.

ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಆರು ತಿಂಗಳ ಬಾಲಕಿಯನ್ನು ಸಾವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ರಿಂಕು (23), ಅವರ ಮಗ ಪ್ರಿಯಾಂಕ್, ಸಹೋದರಿ ಕಾಜಲ್ ಮತ್ತು ತಾಯಿ ಬಬಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಆರ್‌ವಿ ಚಾಲಕ ಕಾನ್‌ಸ್ಟೇಬಲ್ ಸೇರಿದಂತೆ ಪೊಲೀಸರು ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular