
ಘಾಟಾ ಗ್ರಾಮದ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಗ್ಗೆ ಪೊಲೀಸ್ ತಂಡಕ್ಕೆ ತುರ್ತು ಕರೆ ಬಂದ ನಂತರ ಗ್ವಾಲ್ಪಹಾರಿ ಪೊಲೀಸ್ ಪೋಸ್ಟ್ ನ ತುರ್ತು ಪ್ರತಿಕ್ರಿಯೆ ವಾಹನ (ಇಆರ್ವಿ) ತೆರಳುತ್ತಿತ್ತು.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಆರು ತಿಂಗಳ ಬಾಲಕಿಯನ್ನು ಸಾವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ರಿಂಕು (23), ಅವರ ಮಗ ಪ್ರಿಯಾಂಕ್, ಸಹೋದರಿ ಕಾಜಲ್ ಮತ್ತು ತಾಯಿ ಬಬಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಆರ್ವಿ ಚಾಲಕ ಕಾನ್ಸ್ಟೇಬಲ್ ಸೇರಿದಂತೆ ಪೊಲೀಸರು ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ.

