alex Certify ಪರೀಕ್ಷೆಯಲ್ಲಿ​ ಫೇಲಾದವರಿಗೆ ಜೀವನ ಸಂದೇಶ ನೀಡುತ್ತೆ ಯುವತಿಯ ಈ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆಯಲ್ಲಿ​ ಫೇಲಾದವರಿಗೆ ಜೀವನ ಸಂದೇಶ ನೀಡುತ್ತೆ ಯುವತಿಯ ಈ ಟ್ವೀಟ್

‘ಸಿಎ ಫೈನಲ್‌ ಗ್ರೂಪ್‌-1 ಪರೀಕ್ಷೆಗೆ ಹಾಜರಾದ ಸುಶ್ರುತಿ ತಯಾಲ್‌, ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ 12 ಅಂಕಗಳಿಂದ ಫೇಲ್‌ ಆಗಿರುವವರ ಬಗ್ಗೆ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಪ್ರಯತ್ನಿಸಿದರೆ ಖಂಡಿತ ಫಲ ಸಿಗುತ್ತದೆ ಎಂದಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಫೇಲ್​ ಆದ ಬಗ್ಗೆ ಅವರು ಸರಣಿ ಟ್ವೀಟ್​ ಮಾಡಿದ್ದಾರೆ.

“ಹೌದು, ನಾನು 12 ಅಂಕಗಳಿಂದ ಅನುತ್ತೀರ್ಣಳಾದೆ. ಹಾಗೆಂದು ನಾನು ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಕಡಿಮೆ ಅಂಕ ಬಂತು ಎಂದ ಮಾತ್ರಕ್ಕೆ ನಾವು ಕಡಿಮೆ ಪ್ರಯತ್ನಗಳನ್ನು ಮಾಡಿದ್ದೇವೆ ಅಥವಾ ನಾನು ಅದಕ್ಕೆ ಅರ್ಹಳಲ್ಲ ಎಂಬುದೂ ಅರ್ಥವಲ್ಲ. ಕೆಲವೊಮ್ಮೆ ನಾವು ಎಲ್ಲದರಲ್ಲೂ ಹೋರಾಡುತ್ತೇವೆ, ಆದರೆ ಕೊನೆಯಲ್ಲಿ ನಮ್ಮ ಅದೃಷ್ಟದ ವಿರುದ್ಧ ಹೋರಾಡಲು ಸಾಧ್ಯವಿಲ್ಲ” ಎಂದು ಸರಣಿ ಟ್ವೀಟ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ಬೀಳುತ್ತೇನೆ ಮತ್ತು ನಾನು ಮತ್ತೆ ಮತ್ತೆ ಎದ್ದು ನಿಲ್ಲುತ್ತೇನೆ. ಪ್ರಾಮಾಣಿಕವಾದ ಏಳುಬೀಳು ಜೀವನದಲ್ಲಿ ಇದ್ದೇ ಇರುತ್ತದೆ. ನೀವು ಒಳ್ಳೆಯ ಫಲಿತಾಂಶ ಪಡೆಯಲು 100 ಪರ್ಸೆಂಟ್ ಪ್ರಯತ್ನ ಮಾಡಿದರೂ ಸಮಯ ನಿಮ್ಮ ಕೈಯಲ್ಲಿ ಇಲ್ಲದ ಕಾಲವೂ ಬರುತ್ತದೆ. ಆ ಸತ್ಯವನ್ನು ಒಪ್ಪಿಕೊಳ್ಳುವುದು ನರಕದಂತೆ. ಆದರೆ ಇದನ್ನು ಒಪ್ಪಿಕೊಳ್ಳಲೇ ಬೇಕು” ಎಂದು ಅವರು ಹೇಳಿದ್ದಾರೆ.

ಮರಳಿ ಪ್ರಯತ್ನಿಸಿ, ಯಶಸ್ಸು ಖಂಡಿತ ನಿಮ್ಮ ಪಾಲಾಗುತ್ತದೆ ಎಂದು ಹಲವರು ಈಕೆಗೆ ಧೈರ್ಯ ತುಂಬುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...