ಸೂಪರ್ ​ಸ್ಟಾರ್​ಗಳು ಆಹಾರ ಸ್ವೀಕರಿಸುವುದು ಹೇಗೆ? ಇಲ್ಲಿದೆ ನೋಡಿ ವಿಡಿಯೋ

ನಿಮಗೆ ತುಂಬಾ ಬೋರಾಗಿದ್ದರೆ ನಿಮ್ಮನ್ನು ನಗುವಂತೆ ಮಾಡುವ ವಿಡಿಯೋ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ. ವೈರಲ್ ವಿಡಿಯೋವನ್ನು ಜಗಜ್ಯೋತ್ ಸಿಂಗ್ ಮತ್ತು ಸ್ವಿಗ್ಗಿ ಎಂಬ ಕಂಟೆಂಟ್ ಕ್ರಿಯೇಟರ್ ಜಂಟಿಯಾಗಿ ಶೇರ್​ ಮಾಡಿಕೊಂಡಿದ್ದಾರೆ.

ಸೆಲೆಬ್ರಿಟಿಗಳ ಆಹಾರ ಸ್ವೀಕರಿಸುವ ವ್ಯಕ್ತಿಯನ್ನು ಅನುಕರಿಸುವ ವಿಡಿಯೋ ಇದಾಗಿದೆ. ಜಗಜ್ಯೋತ್ ಅವರು ವರುಣ್ ಧವನ್, ಕಾರ್ತಿಕ್ ಆರ್ಯನ್, ಜಾನ್ ಅಬ್ರಹಾಂ, ರಣವೀರ್ ಸಿಂಗ್ ಮತ್ತು ಗುರು ರಾಂಧವಾ ಅವರಂತಹ ಸೆಲೆಬ್ರಿಟಿಗಳನ್ನು ಅನುಕರಿಸಿ ಅವರು ಹೇಗೆ ಸ್ವಿಗ್ಗಿಯಲ್ಲಿ ಆಹಾರದ ಆದೇಶಗಳನ್ನು ಸ್ವೀಕರಿಸಬಹುದು ಎನ್ನುವುದನ್ನು ಮಿಮಿಕ್ರಿ ಮೂಲಕ ಮಾಡಿ ತೋರಿಸಿದ್ದಾರೆ.

ವರುಣ್‌ನ ಟ್ರೇಡ್‌ಮಾರ್ಕ್ ಸ್ಮೈಲ್‌ನೊಂದಿಗೆ ಮತ್ತು ಕಾರ್ತಿಕ್ ಆರ್ಯನ್ ಅವರ ಪಾಪ್‌ಗಳತ್ತ ಕೈ ಬೀಸುವ ಶೈಲಿಯೊಂದಿಗೆ, ಜಗಜ್ಯೋತ್ ಅವರ ಸ್ಟೈಲ್​ನಲ್ಲಿಯೇ ಆಹಾರ ಸ್ವೀಕರಿಸುವ ಬಗೆಯನ್ನು ತೋರಿಸಿ ಎಲ್ಲರನ್ನೂ ನಕ್ಕುನಗಿಸುತ್ತಾರೆ. ರಣವೀರ್ ಸಿಂಗ್ ಅವರ ಆನ್-ಪಾಯಿಂಟ್ ಮಿಮಿಕ್ರಿ ಕೂಡ ಇದರಲ್ಲಿ ಇದೆ.

“ಈ ಖ್ಯಾತನಾಮರು ಏನು ಆರ್ಡರ್ ಮಾಡಿರಬಹುದು ಎಂದು ನೀವು ಊಹಿಸಬಲ್ಲಿರಾ? ಎಂದು ಶೀರ್ಷಿಕೆ ಪೋಸ್ಟ್​ಗೆ ನೀಡಲಾಗಿದೆ. ಈ ಮಿಮಿಕ್ರಿ ನೋಡಿದ ನೆಟ್ಟಿಗರು ಈ ನಟರು ಏನೆಲ್ಲಾ ಆಹಾರ ಆರ್ಡರ್​ ಮಾಡಿರಬಹುದು ಎಂದು ಊಹಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read