HomeBeautyದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ತಲೆಗೂದಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಹೆಚ್ಚಿನವರಿಗೆ ಸುಂದರ ಕೇಶರಾಶಿ ಪಡೆಯುವ ಭಾಗ್ಯವೇ ಇರುವುದಿಲ್ಲ. ಈಗಂತೂ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ಬೋಳಾಗುತ್ತಿವೆ. ಅಂಥ ಸಂದರ್ಭದಲ್ಲಿ ಯುವತಿಯೊಬ್ಬಳ ಕೇಶರಾಶಿ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್​ ಆಗುತ್ತಿದೆ.

ರಷ್ಯಾದ ಕವಯಿತ್ರಿ ಜಿನೆವೀವ್ ಡವ್, 4.9 ಅಡಿಗಳಷ್ಟು ಉದ್ದನೆಯ ಕೂದಲನ್ನು ಹೊಂದಿದ್ದು ಆಕೆಯ ಇನ್ಸ್​ಸ್ಟಾಗ್ರಾಮ್​ನಲ್ಲಿ ಈ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಒಂದೂವರೆ ಲಕ್ಷಕ್ಕೂ ಮಿಗಿಲಾಗಿ ಫಾಲೋವರ್ಸ್ ಹೊಂದಿರುವ ಜೆನಿವೀಲ್​, ಉದ್ದನೆಯ ಕೂದಲನ್ನು ನೋಡಿಕೊಳ್ಳುವ ಮತ್ತು ಅದನ್ನು ಆರೋಗ್ಯಕರವಾಗಿರಿಸುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾನು ಹೇಗೆ ಕೂದಲನ್ನು ರಕ್ಷಿಸಿಕೊಳ್ಳುತ್ತೇನೆ, ರೇಷ್ಮೆಯಂತಹ ಕೂದಲನ್ನು ಹೊಂದಲು ಏನು ಮಾಡಬೇಕು ಎನ್ನುವ ಸಲಹೆಗಳನ್ನು ಈಕೆ ನೀಡಿದ್ದಾಳೆ. “ನಾನು ಧೂಮಪಾನ ಮಾಡುವುದಿಲ್ಲ ಮತ್ತು ಮದ್ಯಪಾನ ಮಾಡುವುದಿಲ್ಲ, ಬಹುಶಃ ನನ್ನ ಕೂದಲಿನ ಆರೋಗ್ಯಕ್ಕೆ ಇದು ದೊಡ್ಡ ಕೊಡುಗೆ” ಎಂದು ಈಕೆ ಹೇಳಿದ್ದಾಳೆ.

ನಾನು ನನ್ನ ಕೂದಲನ್ನು ಬಾಚಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತೇನೆ ಎಂದು ತಿಳಿದಿರಬಹುದು. ಆದರೆ ಹತ್ತು ನಿಮಿಷ ನನಗೆ ಜಡೆ ಹೆಣೆಯಲು ಸಾಕು. ಸ್ಟೈಲ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಗೆ ಇನ್ನೂ ಅಗತ್ಯವಿದ್ದರೆ ನಾನು ಇನ್ನಷ್ಟು ಸಲಹೆ ಕೊಡುತ್ತೇನೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಕೂದಲು ಸೋಂಪಾಗಿ ಬೆಳೆಯುತ್ತದೆ ಎಂದಿದ್ದಾಳೆ.

ಆದರೆ ಹಲವರು ಈ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು, ಮದ್ಯಪಾನ, ಧೂಮಪಾನ ಮಾಡದ ಮಾತ್ರಕ್ಕೆ ಕೂದಲು ಚೆನ್ನಾಗಿ ಇರುತ್ತದೆ ಎನ್ನುವುದು ತಪ್ಪು.‌ ಎಷ್ಟೋ ಮಂದಿ ಈ ವ್ಯಸನಿಗಳಲ್ಲ, ಹಾಗಿದ್ದರೂ ಕೂದಲು ಉದುರುತ್ತದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular