HomeCrimeವೀಸಾ ಬೇಕೆಂದರೆ ಸೆಕ್ಸ್​ ಗೆ ಸಹಕರಿಸು: ಪಾಕ್​ ಅಧಿಕಾರಿಗಳ ಭಯಾನಕ ರೂಪ ಬಯಲು

ವೀಸಾ ಬೇಕೆಂದರೆ ಸೆಕ್ಸ್​ ಗೆ ಸಹಕರಿಸು: ಪಾಕ್​ ಅಧಿಕಾರಿಗಳ ಭಯಾನಕ ರೂಪ ಬಯಲು

ನವದೆಹಲಿ: ಸಂಪೂರ್ಣ ದಿವಾಳಿಯಲ್ಲಿ ಮುಳುಗಿದರೂ ಪಾಕಿಸ್ತಾನಿಗಳಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ಹೋದ ಮಹಿಳೆಯೊಬ್ಬರಿಂದ ಸೆಕ್ಸ್​ ಬಯಕೆ ಸಲ್ಲಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳು ಭಾರತೀಯ ಮಹಿಳೆ ಮುಂದೆ ಈ ಬೇಡಿಕೆ ಇಟ್ಟಿದ್ದಾರೆ.

ಪ್ರೊಫೆಸರ್ ಒಬ್ಬರು ಪಾಕಿಸ್ತಾನಕ್ಕೆ ವೀಸಾ ಬೇಕೆಂದು ಹೋದಾಗ ಅಧಿಕಾರಿಗಳಿಂದ ಈ ಬಯಕೆ ವ್ಯಕ್ತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಾಹಿರ್ ಅಬ್ಬಾಸ್ ಮತ್ತು ಆಸಿಫ್ ಎಂಬ ಪಾಕಿಸ್ತಾನಿ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದರು ಒಂದು ಪ್ರೊಫೆಸರ್​ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಾಹೋರ್‌ಗೆ ಭೇಟಿ ನೀಡಲು ಪಾಕಿಸ್ತಾನ ಹೈಕಮಿಷನ್‌ನಲ್ಲಿ ತನ್ನ ವೀಸಾ ಅರ್ಜಿಗಾಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿದ್ದೆ. ವೀಸಾ ಸಂದರ್ಶನದ ಸಮಯದಲ್ಲಿ, ಸಿಬ್ಬಂದಿ ಅನುಚಿತವಾದ ಪ್ರಶ್ನೆಗಳನ್ನು ಕೇಳಿ ನಂತರ ಸೆಕ್ಸ್​ ಮಾಡಿದರೆ 24 ಗಂಟೆಯ ಒಳಗೆ ವೀಸಾ ಕೊಡುವುದಾಗಿ ಹೇಳಿದರು ಎಂದಿದ್ದಾರೆ. ಈ ದೂರಿನ ಅನ್ವಯ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆಯೋ ಕಾದು ನೋಡಬೇಕಿದೆ.

 

For Latest News Updates, Join Our Whatsapp Community🚩
RELATED ARTICLES

Most Popular