HomeKarnatakaBIG NEWS: ಬಿಜೆಪಿ ಶಾಸಕರ ಕಾರು ಡಿಕ್ಕಿ; ವೃದ್ಧೆ ದುರ್ಮರಣ

BIG NEWS: ಬಿಜೆಪಿ ಶಾಸಕರ ಕಾರು ಡಿಕ್ಕಿ; ವೃದ್ಧೆ ದುರ್ಮರಣ

ಕೊಪ್ಪಳ: ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ಅವರ ಕಾರು ಡಿಕ್ಕಿಯಾಗಿ ವೃದ್ಧೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಕ್ರಾಸ್ ಬಳಿ ನಡೆದಿದೆ.

70 ವರ್ಷದ ಮರಿಯಮ್ಮ ನಾಯಕ್ ಮೃತ ಮಹಿಳೆ. ನಿನ್ನೆ ಮೈಲಾಪುರ ಕ್ರಾಸ್ ಬಳಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ವೃದ್ದೆ ಮರಿಯಮ್ಮಗೆ ಶಾಸಕ ದಡೇಸುಗೂರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಯಿ ತಪ್ಪಿಸಲು ಹೋಗಿ ಕಾರು ವೃದ್ಧೆಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಮರಿಯಮ್ಮ ಅವರನ್ನು ಶಾಸಕರು ಕಾರಟಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಮರಿಯಮ್ಮ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮರಿಯಮ್ಮ ಇಂದು ಮೃತಪಟ್ಟಿದ್ದಾರೆ. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular