ಕೋವಿಡ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎದುರಿಸಲು ಚೀನಾದಲ್ಲಿ ನಡೆಯುತ್ತಿರುವ ಹೋರಾಟವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಚೀನಾದಲ್ಲಿನ ಕೋವಿಡ್ ತುರ್ತು ಪರಿಸ್ಥಿತಿಯನ್ನು ತೋರಿಸುವ ಮತ್ತೊಂದು ವೈರಲ್ ವಿಡಿಯೋದಲ್ಲಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಯ ಹೊರಭಾಗದಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಡಿಸೆಂಬರ್ 28 ಎಂದು ಉಲ್ಲೇಖಿಸಲಾಗಿದೆ, ಚೀನಾದ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶವಾದ ಶಾಂಘೈನಲ್ಲಿದೆ ಎಂದು ಹೇಳಲಾದ ಆಸ್ಪತ್ರೆಯ ಹೊರಗೆ ಜನರು ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದು.
ಶಾಂಘೈ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ಕೆಲವು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಹೇಳಿದ್ದಾರೆ. ಸ್ಥಳಾವಕಾಶದ ಕೊರತೆಯಿಂದ ರೋಗಿಗಳಿಗೆ ಹಜಾರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಬಳಕೆದಾರರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
There are those comparing the height of Beijing's outbreak last week to the current outbreak in Shanghai, where many (elderly) patients are struggling, along with healthcare workers facing mental and physical exhaustion. pic.twitter.com/EXzUpSR3ik
— Manya Koetse (@manyapan) January 1, 2023
Dec 28 video, this hospital in Shanghai treated some patients outside the overflowing emergency department. pic.twitter.com/UHSVjE3m3Y
— Manya Koetse (@manyapan) January 2, 2023

