ಸ್ಪೇನ್ನಲ್ಲಿನ ಹೊಸ ಪರಿಸರ ಕಾನೂನು ಜಾರಿಯಾಗಿದೆ. ಅವುಗಳಲ್ಲಿ ಒಂದು ಸಿಗರೇಟ್ ತುಂಡುಗಳನ್ನು ಬಿಸಾಡುವುದು. ಒಂದು ವೇಳೆ ಗ್ರಾಹಕರು ಸಿಗರೇಟ್ ತುಂಡುಗಳನ್ನು ರಸ್ತೆಯ ಮೇಲೆ ಬಿಸಾಡಿದರೆ ಅದಕ್ಕೆ ವ್ಯಾಪಾರಸ್ಥರು ದಂಡ ಕಟ್ಟಬೇಕು.
ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮರುಬಳಕೆಯನ್ನು ಹೆಚ್ಚಿಸಲು ಉದ್ದೇಶಿಸಿರುವ ಹಲವಾರು ನೀತಿಗಳನ್ನು ಮಾಡಲಾಗಿದ್ದು, ಅದರಲ್ಲಿ ಇದೂ ಒಂದು. ಹತ್ತಿ ಮೊಗ್ಗುಗಳು, ವಿಸ್ತರಿತ ಪಾಲಿಸ್ಟೈರೀನ್ ಕಪ್ಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಏಕ-ಬಳಕೆಯ ಪ್ಲಾಸ್ಟಿಕ್ ಕಟ್ಲರಿ ಮತ್ತು ಪ್ಲೇಟ್ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗ್ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ.
ಶುಚಿಗೊಳಿಸುವಿಕೆಯನ್ನು ಹೇಗೆ ನಡೆಸಲಾಗುತ್ತದೆ ಅಥವಾ ಎಷ್ಟು ವೆಚ್ಚವಾಗುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಗ್ರಾಹಕರು ಸಿಗರೇಟ್ ಅನ್ನು ಸೇದಿ ಅದರ ತುಂಡನ್ನು ಅಲ್ಲಿಯೇ ಬಿಡದಂತೆ ಅಂಗಡಿಯವರು ಎಚ್ಚರಿಕೆ ವಹಿಸಬೇಕಾಗಿದೆ. ಒಂದು ವೇಳೆ ಅಂಗಡಿ ಎದುರೇನಾದರೂ ಹೀಗೆ ಸಿಗರೇಟ್ ತುಂಡು ಕಂಡುಬಂದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ.
ಸಿಗರೇಟ್ ತುದಿಗಳಿಂದ ಸೀಸದಂತಹ ಹಾನಿಕಾರಕ ರಾಸಾಯನಿಕ ಹೊರಬರುತ್ತದೆ. ಇದು ಪರಿಸರದ ಜೊತೆ ಸೇರಿದಾಗ ಅದನ್ನು ಹೊರಹಾಕಲು ಸುಮಾರು 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಕಟ್ಟುನಿಟ್ಟಿನ ಕ್ರಮ ಎಂದು ಸ್ಪೇನ್ ಹೇಳಿದೆ.