
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಪೊಲೀಸರು ಬಂಧಿಸುತ್ತಾರೆ. ಈಗಾಗಲೇ 6 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೋ ಏನೋ ಬರೆದಿಟ್ಟಿದ್ದಾರೆ ಅಂದ ಮಾತ್ರಕ್ಕೆ ಬಂಧಿಸಲು ಆಗಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ ಎಂದರು.
ಯಾವುದೋ ವ್ಯವಹಾರಕ್ಕೆ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಪತ್ನಿ ಕೂಡ ದೂರು ನೀಡಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ ಹಂತದಲ್ಲಿ ನಾನು ಏನು ಹೇಳಿದರೂ ತಪ್ಪಾಗುತ್ತೆ ಎಂದು ತಿಳಿಸಿದರು.

