HomeKarnatakaಕುಸಿದುಬಿದ್ದ ಹೆಡ್ ಕಾನ್ಸ್ ಟೇಬಲ್; ಹೃದಯಾಘಾತದಿಂದ ಸಾವು

ಕುಸಿದುಬಿದ್ದ ಹೆಡ್ ಕಾನ್ಸ್ ಟೇಬಲ್; ಹೃದಯಾಘಾತದಿಂದ ಸಾವು

ದೇವನಹಳ್ಳಿ: ಏಕಾಏಕಿ ಎದೆ ನೋವಿನಿಂದ ಕುಸಿದು ಬಿದ್ದ ಹೆಡ್ ಕಾನ್ಸ್ ಟೇಬಲ್ ಓರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ವಿರೂಪಾಕ್ಷ ಹೃದಯಾಘಾತದಿಂದ ನಿಧನರಾದ ಹೆಡ್ ಕಾನ್ಸ್ ಸ್ಟೇಬಲ್. ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗಿದ್ದ ವಿರೂಪಾಕ್ಷ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ವಿರೂಪಾಕ್ಷ ಹಲವು ವರ್ಷಗಳಿಂದ ದೇವನಹಳ್ಳಿ ಠಾಣೆ, ಏರ್ ಪೋರ್ಟ್ ಪೊಲೀಸ್ ಠಾಣೆ ಸೇರಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಬಡ್ತಿ ಮೇರೆಗೆ ದೇವನಹಳ್ಳಿ ಠಾಣೆಯಿಂದ ಹೆಬ್ಬಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular