ಹೊಸ ವರ್ಷಾಚರಣೆ ವೇಳೆ ದೆಹಲಿಯಂತೆ ನೋಯ್ಡಾದಲ್ಲೂ ಭೀಕರ ಅಪಘಾತ; ಮೂವರು ಯುವತಿಯರಿಗೆ ಡಿಕ್ಕಿ ಹೊಡೆದ ಕಾರು

ಹೊಸ ವರ್ಷದಂದು ದೆಹಲಿಯ ಭೀಕರ ಅಪಘಾತದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರ್ ಆಕೆಯನ್ನು 12 ಕಿಲೋಮೀಟರ್ ವರೆಗೆ ಎಳೆದುಕೊಂಡು ಹೋಗಿ ಯುವತಿ ಸಾವನ್ನಪ್ಪಿದ ಘಟನೆಯಂತೆಯೇ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಹೊಸ ವರ್ಷದ ಮುನ್ನಾ ದಿನದಂದು (ಡಿಸೆಂಬರ್ 31) ಅವಘಡ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಸ್ಯಾಂಟ್ರೋ ಕಾರು ಮೂವರು ಹುಡುಗಿಯರಿಗೆ ಡಿಕ್ಕಿ ಹೊಡೆದಿದ್ದು ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತರಿಗೆ ತಿಳಿದಿರುವ ಜನರಿಂದ ಸ್ವೀಕರಿಸಿದ ದೂರಿನ ನಂತರ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 338 (ಮಾನವನ ಪ್ರಾಣಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ಕೃತ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡುವ ಮೂಲಕ ಯಾವುದೇ ವ್ಯಕ್ತಿಗೆ ಘೋರವಾದ ಗಾಯವನ್ನು ಉಂಟು ಮಾಡುತ್ತದೆ. ಅಥವಾ ಇತರರ ವೈಯಕ್ತಿಕ ಸುರಕ್ಷತೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತರ ಸ್ನೇಹಿತರಿಂದ ರಾತ್ರಿ 10 ಗಂಟೆ ಸುಮಾರಿಗೆ ದೂರು ಸ್ವೀಕರಿಸಿದ್ದೇವೆ. ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ಪ್ರತ್ಯಕ್ಷದರ್ಶಿಗಳು ಅವರಿಗೆ ಬಿಳಿ ಸ್ಯಾಂಟ್ರೋ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿಸಿದರು. ನಾವು ತಂಡಗಳನ್ನು ರಚಿಸಿದ್ದೇವೆ ಮತ್ತು ಪ್ರದೇಶದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಬೀಟಾ 2 ಪೊಲೀಸ್ ಠಾಣೆಯ ಸ್ಟೇಷನ್ ಹೆಡ್ ಆಫೀಸರ್ (ಎಸ್‌ಎಚ್‌ಒ) ಅಂಜನಿ ಕುಮಾರ್ ಸಿಂಗ್ ಹೇಳಿದರು.

ಪೊಲೀಸರ ಪ್ರಕಾರ, ಬಿಹಾರ ಮೂಲದ ಸ್ವೀಟಿ ಕುಮಾರ್ (22) ಎಂದು ಗುರುತಿಸಲಾದ ವಿದ್ಯಾರ್ಥಿನಿಯೊಬ್ಬರು ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಕೆಯ ತಲೆಗೆ ಪೆಟ್ಟಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರುಣಾಚಲ ಪ್ರದೇಶದ ಕರ್ಸೋನಿ ಡಾಂಗ್ ಮತ್ತು ಮಣಿಪುರದ ಅಂಗನಬಾ ಎಂಬ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೇ ದಿನ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read