HomeKarnatakaBIG NEWS: ಏಕಾಏಕಿ ಕುಸಿದುಬಿದ್ದ ಸೇತುವೆ; ಅವಶೇಷಗಳಡಿ ಸಿಲುಕಿಕೊಂಡ ಕಾರು

BIG NEWS: ಏಕಾಏಕಿ ಕುಸಿದುಬಿದ್ದ ಸೇತುವೆ; ಅವಶೇಷಗಳಡಿ ಸಿಲುಕಿಕೊಂಡ ಕಾರು

ರಾಮನಗರ; ರಾಮನಗರದಲ್ಲಿ ಮತ್ತೊಂದು ಸೇತುವೆ ಕುಸಿದುಬಿದ್ದಿದೆ. ಸೇತುವೆ ಮೇಲೆ ಕಾರು ಚಲಿಸುತ್ತಿದ್ದಾಗಲೇ ಈ ಅವಘಡ ಸಂಭವಿಸಿದ್ದು, ಕಾರು ಸೇತುವೆಯಲ್ಲಿ ಸಿಲುಕಿಕೊಂಡಿದೆ.

ರಾಮನಗರದ ಹರಿಸಂದ್ರಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಮೂಲದ ಕಾರು ಇದಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ತೆರಳುತ್ತಿದ್ದರು. ಈ ವೇಳೆ ಸೇತುವೆ ಮೇಲೆ ಕಾರು ತೆರಳುತ್ತಿದ್ದಾಗಲೇ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular