ಶಬ್ಧಗಳಲ್ಲೂ ಶಕ್ತಿಯಿದೆ. ಪ್ರತಿಯೊಬ್ಬರ ನಾಲಿಗೆಯ ಮೇಲೂ ಸರಸ್ವತಿ ನಲಿದಾಡುತ್ತಾಳಂತೆ. ಆಕೆ ಮನಸ್ಸು ಮಾಡಿದಾಗಲೆಲ್ಲ ನೀವು ಆಡಿದ್ದು ನಿಜವಾಗುತ್ತದೆ. ಧನಾತ್ಮಕ ಸ್ವಯಂ ಚರ್ಚೆ ನಮ್ಮ ಮೆದುಳಿನಲ್ಲೂ ಬದಲಾವಣೆ ತರುತ್ತದೆ ಅನ್ನೋದನ್ನು ವಿಜ್ಞಾನ ಕೂಡ ಒಪ್ಪಿಕೊಂಡಿದೆ.
ಹಾಗಾಗಿ ಮಾತನಾಡುವಾಗ ಪದಗಳ ಆಯ್ಕೆ ಬಹುಮುಖ್ಯ. ಧನಾತ್ಮಕ ಹೇಳಿಕೆಗಳಿಂದ ನಿಮ್ಮ ಆತ್ಮ ಸುಧಾರಣೆಯಾಗುತ್ತದೆ. ಹೇಳಿಕೆಗಳಿಂದಲೂ ಹಿತಾನುಭವವಾಗುತ್ತದೆ, ಹಾರ್ಮೋನುಗಳ ಮಟ್ಟ ಸುಧಾರಿಸುತ್ತದೆ, ನಮ್ಮ ಮೆದುಳಿನಿಂದ ಸದಾ ಧನಾತ್ಮಕ ಚಿಂತನೆ ಹೊರಹೊಮ್ಮಲು ಸಹಕಾರಿಯಾಗುತ್ತದೆ.
ಧನಾತ್ಮಕ ಹೇಳಿಕೆಯ ಶಕ್ತಿ ಹಾಗೂ ಕಲ್ಪನೆಯಿಂದ್ಲೇ ಕ್ರಿಕೆಟ್ ಜಗತ್ತಿನಲ್ಲಿ ಅದ್ವಿತೀಯ ಸಾಧನೆ ಮಾಡಲು ಸಾಧ್ಯವಾಯ್ತು ಅನ್ನೋದನ್ನು ಸ್ವತಃ ಸಚಿನ್ ತೆಂಡೂಲ್ಕರ್ ಅವರು ಕೂಡ ಒಪ್ಪಿಕೊಳ್ಳುತ್ತಾರೆ.
ಯಾವುದಾದರೂ ಒಂದೊಳ್ಳೆ ಘಟನೆ ಘಟಿಸುವ ಮುನ್ನವೇ ಅದರಲ್ಲಿ ನಂಬಿಕೆ ಇಟ್ಟುಕೊಳ್ಳುವ ಬಗ್ಗೆ ನಿಮ್ಮ ಮನಸ್ಸನ್ನು ತರಬೇತಿಗೊಳಿಸುವುದು ಹೇಗೆ ಎಂಬುದಕ್ಕೆ ತಾಜಾ ಉದಾಹರಣೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಹಿಲರಿಗಿಂತ ಹಿಂದಿದ್ದೇನೆ ಅನ್ನೋದು ಗೊತ್ತಿದ್ದರೂ ನಾನು ಲೀಡ್ ನಲ್ಲಿದ್ದೇನೆ, ಗೆಲ್ಲುತ್ತೇನೆ ಎಂದ ಟ್ರಂಪ್ ಅದನ್ನು ಸಾಧಿಸಿ ತೋರಿಸಿದ್ದಾರೆ. ನಿಮ್ಮ ಆತಂಕವನ್ನು ಹೊಡೆದೋಡಿಸಿ, ಕೋಪವನ್ನು ತಣ್ಣಗಾಗಿಸಿ, ಜೋರಾಗಿ ಈ ಕೆಳಗಿನ ಹೇಳಿಕೆಗಳನ್ನು ಉಚ್ಛರಿಸಿದ್ರೆ ಹೊಸ ವರ್ಷದಲ್ಲಿ ಅದೃಷ್ಟ ನಿಮ್ಮದಾಗಲಿದೆ.
ನಾನೇ ನನ್ನ ಜೀವನದ ವಾಸ್ತುಶಿಲ್ಪಿ, ನಾನೇ ಅದಕ್ಕೆ ಅಡಿಪಾಯ ಹಾಕುತ್ತೇನೆ, ವಿಷಯಗಳನ್ನು ಆಯ್ಕೆ ಮಾಡುತ್ತೇನೆ.
ನನ್ನ ದೇಹ ಆರೋಗ್ಯವಾಗಿದೆ, ಮನಸ್ಸು ಅದ್ಭುತವಾಗಿದೆ, ಆತ್ಮ ಶಾಂತವಾಗಿದೆ.
ನಾನು ಈಗಾಗ್ಲೇ ಬಳಸಲು ಆರಂಭಿಸಿರುವಂತಹ ಅಂತ್ಯವಿಲ್ಲದಷ್ಟು ಪ್ರತಿಭೆ ನನ್ನಲ್ಲಿದೆ.
ಈ ಹಿಂದೆ ನನಗೆ ಕೇಡು ಉಂಟುಮಾಡಲು ಯತ್ನಿಸಿದವರನ್ನು ನಾನು ಕ್ಷಮಿಸಿದ್ದೇನೆ, ಶಾಂತಿಯುತವಾಗಿ ಅವರಿಂದ ದೂರವಿರುತ್ತೇನೆ.
ಸವಾಲುಗಳನ್ನು ಎದುರಿಸಲು ನನ್ನಲ್ಲಿ ಅಪಾರ ಸಾಮರ್ಥ್ಯವಿದೆ. ಯಶಸ್ವಿಯಾಗಲು ಕೂಡ ಅಪರಿಮಿತ ಸಾಮರ್ಥ್ಯವಿದೆ.
ನನ್ನಲ್ಲಿ ಧೈರ್ಯವಿದೆ, ನನಗಾಗಿ ಎಂತಹ ಸಂದರ್ಭವನ್ನಾದರೂ ಎದುರಿಸುತ್ತೇನೆ.
ನನ್ನ ನಿರೀಕ್ಷೆಗಿಂತಲೂ ಬೇಗನೆ ಪರಿಪೂರ್ಣ ಸಂಗಾತಿ ನನ್ನ ಬದುಕು ಪ್ರವೇಶಿಸುತ್ತಿದೆ.
ಎಲ್ಲವೂ ಆಗುತ್ತಿರುವುದು ನನ್ನ ಒಳಿತಿಗಾಗಿ.
ನನ್ನ ಪ್ರಯತ್ನಕ್ಕೆ ಇಡೀ ಬ್ರಹ್ಮಾಂಡದ ಬೆಂಬಲವಿದೆ. ನನ್ನ ಕನಸುಗಳು ನನ್ನ ಕಣ್ಣೆದುರೇ ವಾಸ್ತವವಾಗಿ ಬದಲಾಗಲಿವೆ.
ನಾಳೆಯ ಬಗೆಗಿನ ನನ್ನ ಭಯ ಕರಗಿ ಹೋಗುತ್ತಿದೆ.