alex Certify ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರ ಬಾದಾಮಿ ಕಡಲೆಕಾಯಿ ಸೇವನೆ ಆರೋಗ್ಯಕ್ಕೆಷ್ಟು ಉತ್ತಮ…..?

ಕಡಲೆಕಾಯಿ ಅಥವಾ ಶೇಂಗಾದಲ್ಲಿ ಅನೇಕ ಪೋಷಕಾಂಶಗಳಿವೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಯಾಕಂದ್ರೆ ಇದು ಸಹ ಬಾದಾಮಿಯಷ್ಟೇ ಪ್ರಯೋಜನಕಾರಿ.

ಕಡಲೆಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್ ಮತ್ತು ಕೊಬ್ಬಿನಾಮ್ಲಗಳ ಗುಣಲಕ್ಷಣಗಳಿವೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ, ಆದರೆ ಕೆಲವರಿಗೆ ಇದು ಹಾನಿಕಾರಕವೂ ಹೌದು.

ಥೈರಾಯ್ಡ್‌: ನೀವು ಹೈಪೋಥೈರಾಯ್ಡ್ ಹೊಂದಿದ್ದರೆ  ಕಡಲೆಕಾಯಿಯು ನಿಮಗೆ ಹಾನಿ ಮಾಡುತ್ತದೆ. ಕಡಲೆಕಾಯಿಯನ್ನು ತಿನ್ನುವುದರಿಂದ TSH (ಥೈರಾಯ್ಡ್-ಉತ್ತೇಜಿಸುವ ಹಾರ್ಮೋನ್) ಮಟ್ಟ ಹೆಚ್ಚಾಗುತ್ತದೆ. ಇದು ಹೈಪೋಥೈರಾಯ್ಡಿಸಮ್ ಅನ್ನು ಹೆಚ್ಚಿಸುತ್ತದೆ. ಆದರೆ ಕಡಲೆಕಾಯಿಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.

ಯಕೃತ್ತಿನ ಸಮಸ್ಯೆ: ಯಕೃತ್ತಿನ ಸಮಸ್ಯೆ ಇದ್ದರೆ ನೀವು ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು. ಕಡಲೆಕಾಯಿಯಲ್ಲಿರುವ ಅಂಶಗಳು ಯಕೃತ್ತಿನ ಆರೋಗ್ಯಕ್ಕೆ ಹಾನಿಕಾರಕ ಮತ್ತು ಇದನ್ನು ತಿನ್ನುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಲೆಕಾಯಿಯನ್ನು ಹೆಚ್ಚು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಮತ್ತು ಅಜೀರ್ಣ ಉಂಟಾಗುತ್ತದೆ.

ಅಲರ್ಜಿ:ಕೆಲವರಿಗೆ ಕೆಲವು ಬಗೆಯ ಆಹಾರಗಳೆಂದರೆ ಅಲರ್ಜಿ. ಅನೇಕರಿಗೆ ಕಡಲೆಕಾಯಿ ತಿಂದರೆ ಅಲರ್ಜಿಯಾಗುತ್ತದೆ. ಅಂಥವರು ಅದರಿಂದ ದೂರವಿರಿ. ಅಲರ್ಜಿ ಸಮಸ್ಯೆ ಇದ್ದರೂ ಕಡಲೆಕಾಯಿ ತಿಂದರೆ ಉಸಿರಾಟದ ತೊಂದರೆ ಮತ್ತು ಚರ್ಮದ ತುರಿಕೆಗೆ ಒಳಗಾಗಬಹುದು.

ತೂಕ ಹೆಚ್ಚಳ: ಕಡಲೆಕಾಯಿಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ತಿನ್ನುವುದು ಆರೋಗ್ಯಕರ, ಆದರೆ ಇದರಲ್ಲಿರುವ ಕೊಬ್ಬು ತೂಕವನ್ನು ಹೆಚ್ಚಿಸುತ್ತದೆ. ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ರೆ ಕಡಲೆಕಾಯಿ ತಿನ್ನಬೇಡಿ. ಮೊಳಕೆಕಾಳುಗಳೊಂದಿಗೆ ಬೆರೆಸಿ ಅಲ್ಪಪ್ರಮಾಣದಲ್ಲಿ ಅದನ್ನು ಸೇವಿಸಬಹುದು.

ಕಡಲೆಕಾಯಿಯ ಪ್ರಯೋಜನಗಳು 

ಕಡಲೆಕಾಯಿ ಸೇವನೆ ಹೃದಯಕ್ಕೆ ಪ್ರಯೋಜನಕಾರಿ. ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಪೋಷಕಾಂಶಗಳು ಕಡಲೆಕಾಯಿಯಲ್ಲಿವೆ. ಇದನ್ನು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ.

ನೆಲಗಡಲೆಯು ಆಲಿವ್ ಎಣ್ಣೆಯಂತಹ ಉತ್ತಮ ಕೊಬ್ಬನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿಯಲ್ಲಿರುವ ಮೆಗ್ನೀಸಿಯಮ್, ಇನ್ಸುಲಿನ್ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ. ಕಡಲೆಕಾಯಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂಬುದು ಸಹ ಸಾಬೀತಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...