HomeAstroಜ್ಯೋತಿಷ್ಯದ ಪ್ರಕಾರ ʼಡ್ರೈ ಫ್ರೂಟ್ಸ್‌ʼ ನಲ್ಲಿದೆ ಯಶಸ್ಸಿನ ಗುಟ್ಟು

ಜ್ಯೋತಿಷ್ಯದ ಪ್ರಕಾರ ʼಡ್ರೈ ಫ್ರೂಟ್ಸ್‌ʼ ನಲ್ಲಿದೆ ಯಶಸ್ಸಿನ ಗುಟ್ಟು

ಪ್ರತಿ ದಿನ ಪ್ರತಿ ಕ್ಷಣ ಸಂತೋಷ, ಯಶಸ್ಸು ಸಿಗಬೇಕೆಂದು ಮನುಷ್ಯ ಬಯಸ್ತಾನೆ. ಎಷ್ಟೇ ಒಳ್ಳೆಯ ಕೆಲಸ ಮಾಡಿದ್ರೂ ಕೆಲವೊಮ್ಮೆ ಯಶಸ್ಸು ಸಿಗುವುದಿಲ್ಲ. ಇದರಿಂದ ಮನಸ್ಸು ನಿರಾಸೆಗೊಳ್ಳುತ್ತದೆ. ಆದ್ರೆ ಜ್ಯೋತಿಷ್ಯ ಇದಕ್ಕೊಂದು ಒಳ್ಳೆಯ ಮಾರ್ಗವನ್ನು ಹೇಳಿದೆ. ಪ್ರತಿದಿನ ಒಂದೊಂದು ಬಗೆಯ ಡ್ರೈ ಫ್ರೂಟ್ಸ್ ತಿಂದು ಕೆಲಸಕ್ಕೆ ಹೋದಲ್ಲಿ ಯಶಸ್ಸು ನಿಮ್ಮದಾಗುತ್ತದೆ ಎಂದು ಜ್ಯೋತಿಷ್ಯ ಹೇಳಿದೆ.

ಗೋಡಂಬಿ : ಗೋಡಂಬಿ ಎಂದ್ರೆ ಎಲ್ಲರಿಗೂ ಪ್ರೀತಿ. ಈ ಗೋಡಂಬಿಯನ್ನು ವಾರದ ಮೊದಲ ದಿನ ಅಂದ್ರೆ ಸೋಮವಾರ ಸೇವನೆ ಮಾಡಬೇಕು. ಸೋಮವಾರ ನಾಲ್ಕು ಗೋಡಂಬಿ ತಿಂದು ಮನೆ ಬಿಡುವುದರಿಂದ ಯಶಸ್ಸು ಸಿಗುತ್ತದೆ.

ದ್ರಾಕ್ಷಿ : ಸಿಹಿಯಾದ ದ್ರಾಕ್ಷಿಯಲ್ಲಿ ಸಾಕಷ್ಟು ಶುಭ ಫಲಗಳಿವೆ. ಮಂಗಳವಾರ 7 ದ್ರಾಕ್ಷಿಯನ್ನು ತಿಂದು ಮನೆಯಿಂದ ಹೊರಗೆ ಹೋದ್ರೆ ನೀವು ಹೋದ ಕೆಲಸ ಮಂಗಳಕರವಾಗುವುರಲ್ಲಿ ಎರಡು ಮಾತಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಸ್ತಾ ಮತ್ತು ಬಾದಾಮಿ : ಬುಧವಾರ ಜ್ಞಾನ ಹಾಗೂ ಬುದ್ದಿಯ ದಿನವಾಗಿದೆ. ಅಂದು ಐದು ಪಿಸ್ತಾ ಹಾಗೂ ಒಂದು ಬಾದಾಮಿ ತಿನ್ನುವುದರಿಂದ ಯಶಸ್ಸು ನಿಮ್ಮದಾಗುತ್ತದೆ.

ಕೇಸರಿ : ಸೌಂದರ್ಯ ವೃದ್ಧಿ ಹಾಗೂ ಆರೋಗ್ಯಕ್ಕೆ ಕೇಸರಿ ಒಳ್ಳೆಯದು. ಇದನ್ನು ಗುರುವಾರ ಸೇವನೆ ಮಾಡುವುದರಿಂದ ನಿಮ್ಮ ಭವಿಷ್ಯ ಬದಲಾಗುತ್ತದೆ. ಗುರುವಾರ ಮೂರು ಎಸಳು ಕೇಸರಿ ತಿನ್ನಬೇಕು.

ಕಲ್ಲುಸಕ್ಕರೆ : ಶುಕ್ರವಾರ ತಾಯಿ ಲಕ್ಷ್ಮಿಯ ದಿನ. ಅಂದು ಬಿಳಿಯ ಕಲ್ಲು ಸಕ್ಕರೆಯನ್ನು ದೇವಿಗೆ ಅರ್ಪಿಸಿ, ಪ್ರಸಾದವಾಗಿ ಸ್ವೀಕಾರ ಮಾಡಬೇಕು.

ಅಂಜೂರ : ಅಂಜೂರ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದ್ರೆ ಇದರಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಹಾಗೆ ಶನಿವಾರ ಮೂರು ಅಂಜೂರ ತಿಂದು ಮನೆಯಿಂದ ಕೆಲಸಕ್ಕೆ ಹೋದ್ರೆ ನಮ್ಮ ಬಯಕೆ ಈಡೇರುತ್ತದೆ.

ಅಗರೋಟ್ : ಭಾನುವಾರ ಮುಖ್ಯ ಕೆಲಸದ ಮೇಲೆ ಹೊರಗೆ ಹೊರಟಿದ್ದರೆ ಅವಶ್ಯವಾಗಿ ನಾಲ್ಕು ಅಗರೋಟ್ ತಿಂದು ಮನೆ ಬಿಡಿ. ನೀವು ಹೋದ ಕಾರ್ಯ ಯಶಸ್ವಿಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular