ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ ಅಥವಾ ಹಿರಿಯರು ಯಾರಾದ್ರೂ ಇದ್ರೆ ಆಗಾಗ ಹೇಳ್ತಾನೇ ಇರ್ತಾರೆ ಊಟವಾದ ತಕ್ಷಣ ಸ್ನಾನ ಮಾಡೋದು ಒಳ್ಳೆಯದಲ್ಲ ಅಂತಾ.
ಆದ್ರೆ ಊಟವಾದ ಮೇಲೆ ಸ್ನಾನ ಮಾಡಿದರೆ ಏನಾಗತ್ತೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಹೊಟ್ಟೆ ತುಂಬ ಊಟ ಮಾಡಿ ಸ್ನಾನ ಮಾಡಬಾರದು ಅನ್ನೋ ನಂಬಿಕೆಗೆ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೆರಡೂ ಇವೆ.
ಹಿಂದೂ ಗ್ರಂಥಗಳ ಪ್ರಕಾರ ಊಟ, ಓದು ಹಾಗೂ ಪೂಜೆಯ ವೇಳೆ ಒಂದೇ ಬಟ್ಟೆಯನ್ನು ಧರಿಸುವಂತಿಲ್ಲ. ಸ್ನಾನಕ್ಕೂ ಮೊದಲು ಧರಿಸಿದ ಬಟ್ಟೆಯನ್ನೇ ಸ್ನಾನ ನಂತರ ಹಾಕಿಕೊಳ್ಳಬಾರದು ಅಂತಾ ಉಲ್ಲೇಖಿಸಲಾಗಿದೆ.
ಸ್ನಾನ ಮಾಡುವಾಗ ನಿಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಮರುಜೀವ ಸಿಗುತ್ತದೆ. ಕಳೆದ 24 ಗಂಟೆಗಳಲ್ಲಿ ನಿಮ್ಮ ಚರ್ಮಕ್ಕೆ ಅಂಟಿದ್ದ ಕೊಳೆಯನ್ನೆಲ್ಲ ಸ್ನಾನ ತೊಡೆದುಹಾಕುತ್ತದೆ. ಸ್ನಾನದ ಬಳಿಕ ನಿಮ್ಮಲ್ಲಿ ತಾಜಾತನ ಮತ್ತು ಶಕ್ತಿ ತುಂಬಿದಂತೆ ಭಾಸವಾಗುತ್ತದೆ. ಪರಿಣಾಮ ಹಸಿವು ಕಾಣಿಸಿಕೊಳ್ಳುತ್ತದೆ. ಸ್ನಾನಕ್ಕೂ ಮೊದಲು ಊಟ ಮಾಡಿದ್ದರೂ ನೀವು ಮತ್ತೆ ಏನನ್ನಾದರೂ ತಿನ್ನುತ್ತೀರಾ. ಇದರಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸ್ನಾನದ ನಂತರ ಮತ್ತೊಮ್ಮೆ ನೀವು ಏನನ್ನಾದರೂ ತಿಂದ್ರೆ ದೇಹಕ್ಕೆ ಬೇಕಾದ ಪೋಷಕಾಂಶ ಮತ್ತು ಎನರ್ಜಿಯೇನೋ ಸಿಗುತ್ತದೆ. ಆದ್ರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಹೊಟ್ಟೆನೋವು, ಮಲಬದ್ಧತೆ ಕಾಣಿಸಿಕೊಳ್ಳಬಹುದು.