HomeKarnatakaಪೋಷಕರೇ ಎಚ್ಚರ..! ನೀರು ತುಂಬಿದ ಪಾತ್ರೆಗೆ ಬಿದ್ದು ಮಗು ಸಾವು

ಪೋಷಕರೇ ಎಚ್ಚರ..! ನೀರು ತುಂಬಿದ ಪಾತ್ರೆಗೆ ಬಿದ್ದು ಮಗು ಸಾವು

ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಮನೆಯ ಹಿಂಭಾಗದ ಬಚ್ಚಲ ಕೋಣೆಯಲ್ಲಿ ನೀರು ತುಂಬಿದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ.

ರಾಜೇಶ್ವರಿ, ಮಂಜುನಾಥ್ ದಂಪತಿಯ ಮೂರನೇ ಮಗು ವೇದಾ(2) ಮೃತಪಟ್ಟ ಹೆಣ್ಣು ಮಗು. ರಾಜೇಶ್ವರಿ, ಮಂಜುನಾಥ್ ಅವರಿಗೆ ಮೂವರು ಮಕ್ಕಳಿದ್ದು, ದಂಪತಿ ಮನೆ ಸ್ವಚ್ಛಗೊಳಿಸುವ ಉದ್ದೇಶದಿಂದ ಮಕ್ಕಳನ್ನು ಮನೆಯ ಮುಂದೆ ಆಟವಾಡಲು ಬಿಟ್ಟಿದ್ದರು. ಆಟವಾಡುತ್ತಿದ್ದ ವೇದಾ ಮನೆಯ ಪಕ್ಕದ ಖಾಲಿ ಜಾಗದ ಮೂಲಕ ಹಿಂಬದಿಗೆ ಹಿತ್ತಲಿಗೆ ಹೋಗಿದ್ದಾಳೆ. ಪಾತ್ರೆಯಲ್ಲಿದ್ದ ನೀರಿನಲ್ಲಿ ಆಟವಾಡುತ್ತಾ ತಲೆ ಕೆಳಗಾಗಿ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular