ಪ್ರತಿ ಶುಭ ಕಾರ್ಯದ ಮೊದಲು ಗಣೇಶನ ಪೂಜೆ ಮಾಡಲಾಗುತ್ತದೆ. ಗಣೇಶನ ಸಂಕೇತ ಸ್ವಸ್ತಿಕ್ ಚಿಹ್ನೆಯನ್ನು ರಚಿಸಲಾಗುತ್ತದೆ. ಸ್ವಸ್ತಿಕ ರಚಿಸುವುದ್ರಿಂದ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಿ ಸಕಾರಾತ್ಮಕ ಶಕ್ತಿ ವೃದ್ಧಿಸುವ ಶಕ್ತಿ ಸ್ವಸ್ತಿಕಕ್ಕಿದೆ.
ಜ್ಯೋತಿಷ್ಯದ ಪ್ರಕಾರ ಸ್ವಸ್ತಿಕ್ ಚಿಹ್ನೆ ರಚನೆ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಚಿಹ್ನೆ ರಚನೆ ವೇಳೆ ಮಾಡುವ ತಪ್ಪು ಅಮಂಗಳವನ್ನುಂಟು ಮಾಡುತ್ತದೆ.
ದೇವಸ್ಥಾನದ ಹೊರತು ಬೇರೆ ಯಾವುದೇ ಜಾಗದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಉಲ್ಟಾ ರಚಿಸಬಾರದು. ದೇವಸ್ಥಾನದಲ್ಲಿ ಆಸೆ ಪೂರೈಕೆಗೆ ಉಲ್ಟಾ ಸ್ವಸ್ತಿಕವನ್ನು ರಚಿಸಲಾಗುತ್ತದೆ. ಆದ್ರೆ ದೇವಸ್ಥಾನ, ಕಚೇರಿಯಲ್ಲಿ ಅಪ್ಪಿತಪ್ಪಿಯೂ ಉಲ್ಟಾ ಸ್ವಸ್ತಿಕವನ್ನು ರಚಿಸಬಾರದು.
ಸುಂದರವಾಗಿ, ನೇರವಾಗಿ ಸ್ಪಷ್ಟವಾಗಿ ಸ್ವಸ್ತಿಕವಿರಬೇಕು. ಅದು ಅಂಕುಡೊಂಕಾಗಿದ್ದರೆ ಪೂಜೆ ಫಲ ಸಿಗುವುದಿಲ್ಲ.
ಮನೆ ಅಥವಾ ಕಚೇರಿ ಯಾವುದೇ ಪ್ರದೇಶದಲ್ಲಿ ಸ್ವಸ್ತಿಕ ರಚನೆ ವೇಳೆ ಶುಚಿತ್ವದ ಬಗ್ಗೆ ಗಮನ ನೀಡಬೇಕು. ಅಕ್ಕ-ಪಕ್ಕ ಯಾವುದೇ ಕೊಳಕು ಇರಬಾರದು.
ವೈವಾಹಿಕ ಜೀವನದಲ್ಲಿ ಸುಖ ಬಯಸುವವರು ಪೂಜೆ ವೇಳೆ ಅರಿಶಿನದಿಂದ ಸ್ವಸ್ತಿಕ ರಚನೆ ಮಾಡಬೇಕು.
ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಲು ಕುಂಕುಮದ ಸ್ವಸ್ತಿಕ ಶ್ರೇಷ್ಠ.
ಮನೆ ಮೇಲೆ ಕೆಟ್ಟ ಕಣ್ಣು ಬೀಳದಂತೆ ನೋಡಿಕೊಳ್ಳಲು ಮನೆ ಹೊರಗೆ ಸಗಣಿಯಿಂದ ಸ್ವಸ್ತಿಕ ರಚನೆ ಮಾಡಬೇಕು.