ʼಬಾಳೆ ಎಲೆʼ ಹೀಗೆ ಉಪಯೋಗಿಸಿ ಮಾಡಿ ತ್ವಚೆ ರಕ್ಷಣೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹೇಗೆ ಅದರಿಂದ ತ್ವಚೆಯ ರಕ್ಷಣೆ ಸಾಧ್ಯ ಎನ್ನುವ ಮಾಹಿತಿ ಇಲ್ಲಿದೆ.

* ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಾಕಿದರೆ ಗುಣಮುಖವಾಗುತ್ತದೆ.

* ತಲೆ ಹೊಟ್ಟಿನ ಸಮಸ್ಯೆ ಇದ್ದರೆ ಅದನ್ನು ಗುಣ ಪಡಿಸುವಲ್ಲಿ ಬಾಳೆ ಎಲೆ ತುಂಬಾ ಸಹಕಾರಿ. ಕುಡಿ ಬಾಳೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತೊಳೆದರೆ ಹೊಟ್ಟು ನಿವಾರಣೆಯಾಗುತ್ತದೆ.

 * ಯಾವುದಾದರೂ ಕೀಟ, ಜೇನು, ನೊಣ ಅಥವಾ ಚೇಳು ಕಚ್ಚಿದಾಗ ಅಥವಾ ತ್ವಚೆಯಲ್ಲಿ ಅಲರ್ಜಿ ಉಂಟಾದರೆ ಬಾಳೆ ಎಲೆ ರಸ ಹಾಕಿದರೆ ಗುಣಮುಖವಾಗುತ್ತದೆ.

* ಬೆಲೆ ಬಾಳುವ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ ಅಲ್ಲನ್ ಟೋಯಿನ್ ಎಂಬ ಅಂಶವಿರುತ್ತದೆ. ಇದು ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ. ಬಾಳೆ ಎಲೆಯಲ್ಲಿ ಕೂಡ ಈ ಅಂಶವಿರುವುದರಿಂದ ಬ್ಯಾಕ್ಟೀರಿಯಾಗಳಿಂದ ತ್ವಚೆಯನ್ನು ರಕ್ಷಿಸಬಹುದು.

* ಹಸಿ ಮೆಣಸಿನಕಾಯಿ ಗಿಡದ ಕುಡಿ ಎಲೆ, ದೊಡ್ಡ ಪತ್ರೆ ಎಲೆ ಮತ್ತು ಬಾಳೆ ಎಲೆ ಇವುಗಳ ರಸವನ್ನು ಮಿಶ್ರ ಮಾಡಿ ಹಚ್ಚಿದರೆ ತ್ವಚೆಯಲ್ಲಿರುವ ಕಲೆ, ತುರಿಕೆ ಸಮಸ್ಯೆಗಳನ್ನು ನಿವಾರಿಸಬಹುದು.

* ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (ಬೀಸ್ ವ್ಯಾಕ್ಸ್) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುತ್ತದೆ.

* ಒಂದು ಕ್ಯೂಬ್ ಐಸ್ ತೆಗೆದುಕೊಂಡು ಅದನ್ನು ಬಾಳೆ ಎಲೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.

* ಬಾಳೆ ಎಲೆಯಿಂದ ತಯಾರಿಸಿದ ಔಷಧಿ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ಪ್ರತಿ ದಿನ ಸೇವಿಸಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read