ಮನೆಯ ಸುಖ-ಶಾಂತಿಗೆ ವಾಸ್ತು ಬಹಳ ಮುಖ್ಯ. ಅನೇಕರು ಚೀನಿ ವಾಸ್ತು ಶಾಸ್ತ್ರದ ಫೆಂಗ್ ಶುಯಿ ನಂಬುತ್ತಾರೆ. ಫೆಂಗ್ ಶುಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಮನೆ, ವ್ಯಾಪಾರಗಳಲ್ಲಿನ ಅನೇಕ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ.
ಫೆಂಗ್ ಶುಯಿಯನ್ನು ಎರಡು ಶಬ್ಧಗಳನ್ನು ಸೇರಿಸಿ ಮಾಡಲಾಗಿದೆ. ಫೆಂಗ್ ಎಂದರೆ ಗಾಳಿ, ಶುಯಿ ಎಂದರೆ ನೀರು. ಫೆಂಗ್ ಶುಯಿ ಗಾಳಿ ಮತ್ತು ಜಲಕ್ಕೆ ಸಂಬಂಧಪಟ್ಟಿದೆ. ಈ ಫೆಂಗ್ ಶುಯಿಯ ಕೆಲವು ಟಿಪ್ಸ್ ಗಳನ್ನು ಅನುಸರಿಸಿದಲ್ಲಿ ಮನೆಯ ವಾಸ್ತು ದೋಷಗಳು ನಿವಾರಣೆಯಾಗಿ ಸಂತೋಷ ನೆಲೆಸುತ್ತದೆ.
ಫೆಂಗ್ ಶುಯಿ ಪ್ರಕಾರ, ವ್ಯಾಪಾರ, ಕೆಲಸದ ತೊಂದರೆ ಇದ್ದವರು, ಕೈಯನ್ನು ಮೇಲಕ್ಕೆತ್ತಿರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಅದೃಷ್ಟ ಕೈಕೊಟ್ಟಿದ್ದರೆ ಹಾಗೂ ಮನೆಯಲ್ಲಿ ಸದಾ ಗಲಾಟೆಯಾಗ್ತಿದ್ದರೆ ಮಲಗಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು.
ಮನೆಯಲ್ಲಿ ಆರೋಗ್ಯದ ಸಮಸ್ಯೆ ಇದ್ದರೆ ಫೆಂಗ್ ಶುಯಿಯಿಂದ ಅದು ನಿವಾರಣೆಯಾಗಬಹುದು. ಅದಕ್ಕಾಗಿ ದೋಣಿಯ ಮೇಲೆ ಕುಳಿತ ಮೂರ್ತಿಯನ್ನು ಮನೆಯಲ್ಲಿ ಇಡಬೇಕು.