alex Certify ಇಲ್ಲಿದೆ ಸವಿಯಾದ ‘ಅಮೃತ ಫಲ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸವಿಯಾದ ‘ಅಮೃತ ಫಲ’ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:

ಕಾಯಿಹಾಲು-3 ಕಪ್, ಹಾಲು- 3 ಕಪ್, ಸಕ್ಕರೆ- 2 ಕಪ್

ಮಾಡುವ ವಿಧಾನ:

ಒಂದು ದೊಡ್ಡ ತೆಂಗಿನ ಕಾಯಿಯನ್ನು ತೆಗೆದುಕೊಂಡು ತುರಿಯಿರಿ. ಬಳಿಕ 2 ಕಪ್ ನಷ್ಟು ನೀರು ಸೇರಿಸಿ ರುಬ್ಬಿಕೊಂಡು ಹಾಲು ತೆಗೆಯಿರಿ. ಬಳಿಕ ಒಂದು ಪಾತ್ರೆಗೆ 3 ಕಪ್ ಕಾಯಿಹಾಲು ಜೊತೆಗೆ 3 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಕುದಿ ಬಂದಾಗ 2 ಕಪ್ ನಷ್ಟು ಸಕ್ಕರೆ ಸೇರಿ ಮಿಕ್ಸ್ ಮಾಡಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.

 ಪಾಕ ಗಟ್ಟಿಯಾಗುವವರೆಗೂ ಕೈಬಿಡದೆ ಸೌಟ್ ತಿರುಗಿಸುತ್ತಾ ಇರಿ. ಗಟ್ಟಿಯಾಗುತ್ತಾ ತಳ ಬಿಡುವಾಗ ತುಪ್ಪ ಸವರಿದ ಪ್ಲೇಟ್ ಗೆ ಇದನ್ನು ಹಾಕಿ ಸರಿಯಾಗಿ ಸೆಟ್ ಮಾಡಿಕೊಳ್ಳಿ. 10 ನಿಮಿಷ ಹಾಗೆಯೇ ಬಿಡಿ ಬಳಿಕ ಬೇಕಾದ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ಬಳಿತ ಅರ್ಧ ಗಂಟೆ ತಣಿಯಲು ಬಿಟ್ಟರೆ ರುಚಿಕರವಾದ ಅಮೃತಫಲ ಸವಿಯಲು ಸಿದ್ಧ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...