ಒಂದು ದೊಡ್ಡ ತೆಂಗಿನ ಕಾಯಿಯನ್ನು ತೆಗೆದುಕೊಂಡು ತುರಿಯಿರಿ. ಬಳಿಕ 2 ಕಪ್ ನಷ್ಟು ನೀರು ಸೇರಿಸಿ ರುಬ್ಬಿಕೊಂಡು ಹಾಲು ತೆಗೆಯಿರಿ. ಬಳಿಕ ಒಂದು ಪಾತ್ರೆಗೆ 3 ಕಪ್ ಕಾಯಿಹಾಲು ಜೊತೆಗೆ 3 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಕುದಿ ಬಂದಾಗ 2 ಕಪ್ ನಷ್ಟು ಸಕ್ಕರೆ ಸೇರಿ ಮಿಕ್ಸ್ ಮಾಡಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
ಪಾಕ ಗಟ್ಟಿಯಾಗುವವರೆಗೂ ಕೈಬಿಡದೆ ಸೌಟ್ ತಿರುಗಿಸುತ್ತಾ ಇರಿ. ಗಟ್ಟಿಯಾಗುತ್ತಾ ತಳ ಬಿಡುವಾಗ ತುಪ್ಪ ಸವರಿದ ಪ್ಲೇಟ್ ಗೆ ಇದನ್ನು ಹಾಕಿ ಸರಿಯಾಗಿ ಸೆಟ್ ಮಾಡಿಕೊಳ್ಳಿ. 10 ನಿಮಿಷ ಹಾಗೆಯೇ ಬಿಡಿ ಬಳಿಕ ಬೇಕಾದ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ಬಳಿತ ಅರ್ಧ ಗಂಟೆ ತಣಿಯಲು ಬಿಟ್ಟರೆ ರುಚಿಕರವಾದ ಅಮೃತಫಲ ಸವಿಯಲು ಸಿದ್ಧ.