ನೀವು ಹಲವು ವಿಧದ ಸ್ಕ್ರಬ್ ಗಳನ್ನು ಬಳಸಿರಬಹುದು. ಆದರೆ ಮನೆಯಲ್ಲೇ ರವೆಯಿಂದ ತಯಾರಿಸಬಹುದಾದ ಸ್ಕ್ರಬ್ ಬಗ್ಗೆ ನಿಮಗೆ ತಿಳಿದಿದೆಯೇ?
ಇದರ ತಯಾರಿಕೆಗೆ ರವೆ, ಮೊಸರು, ಹೆಸರು ಬೇಳೆಯ ಪುಡಿ ಹಾಗೂ ರೋಸ್ ವಾಟರ್ ಇದ್ದರೆ ಸಾಕು. ಮೊದಲು ರವೆಯನ್ನು ಸ್ವಚ್ಛಗೊಳಿಸಿ. ಮೊಸರಿನಲ್ಲಿ ಇದನ್ನು ಹಾಕಿ ನೆನೆಸಿಡಿ. ಐದು ನಿಮಿಷ ಹಾಗೇ ಇರಲು ಬಿಡಿ.
ಬಳಿಕ ಹೆಸರು ಬೇಳೆಯ ಪುಡಿ ಹಾಗೂ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಕಲಸಿ, ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ. ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾಗಿ ತಣ್ಣೀರಿನಿಂದ ತೊಳೆಯಿರಿ.
ಎರಡೂ ಕೈಗಳಿಂದ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ. 15 ನಿಮಿಷದ ಬಳಿಕ ಮುಖ ತೊಳೆಯಿರಿ. ಸ್ಕ್ರಬ್ ಮಾಡಿಕೊಂಡ ದಿನ ಮುಖಕ್ಕೆ ಬಿಸಿನೀರು ಹಾಗೂ ಸೋಪು ತಾಗಿಸದಿರಿ. ಇದು ಸತ್ತ ಜೀವಕೋಶಗಳನ್ನು ದೂರಮಾಡಿ ನಿಮ್ಮ ತ್ವಚೆಗೆ ವಿಶೇಷ ಹೊಳಪು ನೀಡುತ್ತದೆ.