alex Certify ಚಪಾತಿ ಮಿಕ್ಕಿದೆಯೇ….? ಅದೇ ಚಪಾತಿಯನ್ನ ಬಳಸಿ ಮಾಡಿನೋಡಿ ವೆಜ್​ ರೋಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಪಾತಿ ಮಿಕ್ಕಿದೆಯೇ….? ಅದೇ ಚಪಾತಿಯನ್ನ ಬಳಸಿ ಮಾಡಿನೋಡಿ ವೆಜ್​ ರೋಲ್​

ಬೇಕಾಗುವ ಸಾಮಗ್ರಿ : ಕ್ಯಾರೆಟ್​ – 1, ಕತ್ತರಿಸಿದ ಈರುಳ್ಳಿ – 1 , ಎಲೆ ಕೋಸು – 1 ಕಪ್​, ಟೊಮೆಟೋ – 1, ಹಸಿ ಮೆಣಸು – 2, ದೊಡ್ಡ ಮೆಣಸಿನ ಕಾಯಿ – 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಟೇಬಲ್​ ಸ್ಪೂನ್​, ಕೊತ್ತಂಬರಿ ಸೊಪ್ಪು – ಸ್ವಲ್ಪ , ಟೊಮೆಟೋ ಸಾಸ್​ – 2 ಚಮಚ, ಕಾಳುಮೆಣಸಿನ ಪುಡಿ – 1/2 ಚಮಚ, ಅರಿಶಿಣ – ಸ್ವಲ್ಪ, ಗರಂ ಮಸಾಲಾ ಹಾಗೂ ಖಾರದ ಪುಡಿ – 1/2 ಚಮಚ, ಸೌತೇಕಾಯಿ – 1 ಕಪ್​ ಹೆಚ್ಚಿದ್ದು, ಚಾಟ್​ ಮಸಾಲಾ – ಸ್ವಲ್ಪ, ವೆಜ್​ ಮಯೋನೇಸ್​ ಸಾಸ್​ – 1/2 ಚಮಚ, ಚಪಾತಿ – 2, ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನ ಹಾಕಿಕೊಂಡು ಇದಕ್ಕೆ ಮೆಣಸು , ಈರುಳ್ಳಿ, ಕ್ಯಾಬೇಜ್​, ದೊಡ್ಡ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ಒಂದು ನಿಮಿಷವಾದ ಬಳಿಕ ಈರುಳ್ಳಿ ಹಾಗೂ ಕ್ಯಾರೆಟ್​ ಹಾಕಿ ಫ್ರೈ ಮಾಡಿ. ಬಳಿಕ ಎಲ್ಲಾ ಮಸಾಲಾ ಪದಾರ್ಥಗಳನ್ನ ಹಾಕಿಕೊಳ್ಳಿ. ಟೊಮ್ಯಾಟೋ ಕೆಚಪ್​ ಹಾಕಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್​ ಸ್ಟೌ ಆಫ್​ ಮಾಡಿ.

ಚಪಾತಿಯ ಮಧ್ಯದಲ್ಲಿ ಈ ಪದಾರ್ಥವನ್ನ ಉದ್ದವಾಗಿ ಹಾಕಿ. ಇದರ ಮೇಲೆ ಸೌತೆಕಾಯಿ ಹಾಗೂ ಹಸಿ ಸೌತೆಕಾಯಿ ಹಾಕಿ. ಇದರ ಮೇಲೆ ಸ್ವಲ್ಪ ಚಾಟ್​ ಮಸಲಾ, ಟೊಮ್ಯಾಟೋ ಕೆಚಪ್​ ಹಾಗೂ ವೆಜ್​ ಮಯೋನೇಸ್​​ ಸಾಸ್​​ ಹಾಕಿ ಚಪಾತಿಯನ್ನ ರೋಲ್​ ಮಾಡಿ. ಈ ರೋಲ್​ನ್ನು ಕತ್ತರಿಸಿ ಬಳಿಕ ಸವಿಯಲು ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...