HomeHealthಚರ್ಮದ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸೈ ʼರೋಸ್ಮರಿ ಆಯಿಲ್ʼ

ಚರ್ಮದ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸೈ ʼರೋಸ್ಮರಿ ಆಯಿಲ್ʼ

ರೋಸ್ಮರಿ ಎಸೆನ್ಷಿಯಲ್ ಆಯಿಲ್ ನ್ನು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾರೆ. ಆದರೆ ಇದರಿಂದ ದೇಹದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದನ್ನು ಬಳಸಿ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

*ಈ ಎಣ್ಣೆಯಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಇದು ರೋಗಾಣುಗಳ ವಿರುದ್ಧ ಹೋರಾಡುತ್ತದೆ. ಈ ಎಣ್ಣೆಯಿಂದ ದೇಹ ಮಸಾಜ್ ಮಾಡಿದರೆ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.

 *ಶೀತ ಮತ್ತು ಕೆಮ್ಮಿನ ಸಮಸ್ಯೆ ನಿವಾರಿಸಲು ರೋಸ್ಮರಿ ಆಯಿಲ್ ಅತ್ಯುತ್ತಮ ಮನೆಮದ್ದು. ಹಾಗಾಗಿ ಈ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಮಸಾಜ್ ಮಾಡಿದರೆ ಶೀತ ಕೆಮ್ಮು ದೂರವಾಗುತ್ತದೆ.

*ಸ್ನಾಯು ನೋವು ಮತ್ತು ತಲೆನೋವಿನ ಸಮಸ್ಯೆ ಇದ್ದರೆ ರೋಸ್ಮರಿ ಆಯಿಲ್ ನ ವಾಸನೆಯನ್ನು ತೆಗೆದುಕೊಳ್ಳುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ಮತ್ತು ಈ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿದರೆ ಸ್ನಾಯು ನೋವು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular