alex Certify ಹಲಸಿನ ಹಣ್ಣು ಕತ್ತರಿಸಲು ಇಲ್ಲಿದೆ ಸುಲಭ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲಸಿನ ಹಣ್ಣು ಕತ್ತರಿಸಲು ಇಲ್ಲಿದೆ ಸುಲಭ ಟಿಪ್ಸ್

ಹಲಸಿನ ಹಣ್ಣು ಮಾರ್ಕೆಟ್ ಗೆ ಬಂದಾಗಿದೆ. ಇದರ ಘಮಕ್ಕೆ ಎಲ್ಲರೂ ಮನಸೋಲುತ್ತಾರೆ. ತಿನ್ನಲು ತುಂಬಾ ರುಚಿಕರವಾಗಿರುವ ಈ ಹಣ್ಣನ್ನು ಕತ್ತರಿಸಿ ತೊಳೆ ಬಿಡಿಸುವುದು ತುಸು ಕಷ್ಟದ ಕೆಲಸ. ಹಲಸಿನ ಹಣ್ಣನ್ನು ಕತ್ತರಿಸುವಾಗ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸುಲಭವಾಗಿ ಕತ್ತರಿಸಬಹುದು ಮತ್ತು ಸ್ಟೋರ್ ಮಾಡಿ ಇಡಬಹುದು.

ಹಲಸಿನ ಹಣ್ಣನ್ನು ಕತ್ತರಿಸಿದಾಗ ಬಿಳಿ ಬಣ್ಣದಲ್ಲಿ ಬರುವ ಹಾಲು ತುಂಬಾ ಜಿಗುಟಾಗಿರುತ್ತದೆ. ಇದು ಕೈಗೆಲ್ಲಾ ಅಂಟಿಕೊಳ್ಳುತ್ತದೆ. ಹಾಗಾಗಿ ಹಲಸಿನ ಹಣ್ಣನ್ನು ಕತ್ತರಿಸುವಾಗ ಅದರ ಕೆಳಗಡೆ ಪೇಪರ್ ಇಟ್ಟುಕೊಳ್ಳಿ. ಹಾಗೇ ಕೈ ಮತ್ತು ಚಾಕುವಿಗೆ ಸಾಸಿವೆ ಎಣ್ಣೆ ಅಥವಾ ಯಾವುದಾದರು ಅಡುಗೆ ಎಣ್ಣೆಯನ್ನು ಸವರಿಕೊಳ್ಳಿ. ಇದರಿಂದ ಅದರ ಹಾಲಿನ ಅಂಟು ಮೆತ್ತಿಕೊಳ್ಳುವುದಿಲ್ಲ.

 ಹಾಗೇ ಹಲಸಿನ ಹಣ್ಣನ್ನು ಸ್ಟೋರ್ ಮಾಡಿ ಇಡುವಾಗ ಅದರ ತೊಳೆಗೆ ಎಣ್ಣೆಯನ್ನು ಮಿಕ್ಸ್ ಮಾಡಿ ಕವರ್ ಗೆ ಹಾಕಿ ಫ್ರಿಜ್ ನಲ್ಲಿ ಇಡಿ. ಇದರಿಂದ ಹಣ್ಣು ಹಾಳಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...