HomeBeautyಚರ್ಮದ ಪೋಷಣೆ ಮಾಡಲು ಬಳಸಿ ಈ ಎಸೆನ್ಷಿಯಲ್ ಆಯಿಲ್

ಚರ್ಮದ ಪೋಷಣೆ ಮಾಡಲು ಬಳಸಿ ಈ ಎಸೆನ್ಷಿಯಲ್ ಆಯಿಲ್

ವಯಸ್ಸು ಹೆಚ್ಚಾಗುತ್ತಿದ್ದಂತೆ ನಿಮ್ಮ ದೇಹದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಆರೋಗ್ಯ ಸಮಸ್ಯೆಯ ಜೊತೆಗೆ ನಿಮ್ಮ ಸೌಂದರ್ಯವೂ ಕೆಡುತ್ತದೆ. ಚರ್ಮದಲ್ಲಿ ಸುಕ್ಕುಗಳು, ಗೆರೆಗಳು ಕಂಡುಬರುತ್ತವೆ. ಹಾಗಾಗಿ ನಿಮ್ಮ ಚರ್ಮದ ಪೋಷಣೆ ಮಾಡಲು ಎಸೆನ್ಷಿಯಲ್ ಆಯಿಲ್ ಅನ್ನು ನೀವು ಸ್ನಾನ ಮಾಡುವ ನೀರಿಗೆ ಮಿಕ್ಸ್ ಮಾಡಿ ಬಳಸಿ.

*ನಿಂಬೆ ಎಸೆನ್ಷಿಯಲ್ ಆಯಿಲ್ : ಇದು ನಂಜು ನಿವಾರಕವಾಗಿದೆ. ಇದು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಚರ್ಮವನ್ನು ಟೋನ್ ಮಾಡುತ್ತದೆ.

*ರೋಸ್ ಎಸೆನ್ಷಿಯಲ್ ಆಯಿಲ್ : ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. ಇದರ 5 ಹನಿಯನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಬಳಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಶ್ರೀಗಂಧದ ಎಣ್ಣೆ : ಇದು ಚರ್ಮಕ್ಕೆ ಉತ್ತಮವಾಗಿದೆ. ಈ ಎಣ್ಣೆಯ ಜೊತೆಗೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ನೀರಿಗೆ ಹಾಕಿ ಸ್ನಾನ ಮಾಡಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೇ ದೈಹಿಕ ನೋವನ್ನು ನಿವಾರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular