ನಮ್ಮ ಶ್ವಾಸಕೋಶಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಉಸಿರಾಟದ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ ಉಸಿರಾಟವನ್ನು ಸುಧಾರಿಸುತ್ತದೆ.
*ತ್ರೀಕೋನಾಸನ : ಇದು ಶ್ವಾಸೋಶಕ್ಕೆ ಸುಲಭವಾಗಿ ಗಾಳಿಯ ಹರಿವನ್ನು ಹೆಚ್ಚಿಸುತ್ತದೆ. ಇದು ಎದೆಯ ಸ್ನಾಯುಗಳನ್ನು ವಿಸ್ತರಿಸುತ್ತದೆ.
ನಿಮ್ಮ ಕಾಲುಗಳನ್ನು ಮೂರು ಅಡಿ ಅಂತರದಲ್ಲಿ ಇಟ್ಟು ನೇರವಾಗಿ ನಿಂತುಕೊಳ್ಳಿ. ನಿಮ್ಮ ಬಲ ಕಾಲು 90ಡಿಗ್ರಿ ಕೋನದಲ್ಲಿರಬೇಕು. ಎಡ ಕಾಲು 15 ಡಿಗ್ರಿ ಕೋನದಲ್ಲಿರಬೇಕು. ನಿಮ್ಮ ಎಡ ಪಾದವನ್ನು ಸಂಪೂರ್ಣವಾಗಿ ಹೊರಗೆ ಮತ್ತು ಬಲ ಪಾದವನ್ನು ಒಳಗೆ ತಿರುಗಿಸಿ. ಆಳವಾಗಿ ಉಸಿರಾಡಿ ನಿಮ್ಮ ದೇಹವನ್ನು ನಿಮ್ಮ ಸೊಂಟದ ಕೆಳಗಿನಿಂದ ಬಲಕ್ಕೆ ಬಾಗಿಸಿ. ನಿಮ್ಮ ಎಡಕೈಯನ್ನು ಮೇಲಕ್ಕೆತ್ತಿ. ನಿಮ್ಮ ಬಲಕೈಯಿಂದ ನೆಲವನ್ನು ಸ್ಪರ್ಶಿಸಿ. ನಿಮ್ಮ ಎರಡು ತೋಳುಗಳು ಸರಳ ರೇಖೆಯಲ್ಲಿರಬೇಕು.
*ನಾಡಿ ಶೋಧನ್ ಪ್ರಾಣಾಯಾಮ : ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಸ್ತಮಾ ರೋಗಿಗಳಲ್ಲಿ ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ.
ನಿಮ್ಮ ಬೆನ್ನು ಮೂಳೆಯನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ. ನಿಮ್ಮ ಎಡಗೈಯನ್ನು ಎಡಮೊಣಕಾಲಿನ ಮೇಲೆ ಅಂಗೈ ಎದುರಾಗಿ ಇರಿಸಿ. ಬಲಗೈಯ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಣೆಯ ಮೇಲೆ ಹುಬ್ಬುಗಳ ಮಧ್ಯೆ ಇರಿಸಿ.
ಉಂಗುರದ ಬೆರಳು ಮತ್ತು ಕಿರುಬೆರಳನ್ನು ಎಡ ಮೂಗಿನ ಹೊಳ್ಳೆಯ ಮೇಲೆ ಹಾಗು ಹೆಬ್ಬೆರಳನ್ನು ಬಲಮೂಗಿನ ಹೊಳ್ಳೆಯ ಮೇಲೆ ಇರಿಸಿ. ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ ಬಲ ಬದಿಯಿಂದ ನಿಧಾನವಾಗಿ ಉಸಿರಾಡಿ. ಬಳಿಕ ಬಲಮೂಗಿನ ಹೊಳ್ಳೆಯನ್ನು ಮುಚ್ಚಿ ಎಡ ಬದಿಯಿಂದ ನಿಧಾನವಾಗಿ ಉಸಿರಾಡಿ. ಇದನ್ನು ಸ್ವಲ್ಪ ಹೊತ್ತು ಮಾಡಿ.