HomeRecipiesಸುಲಭವಾಗಿ ಮಾಡಬಹುದು ರುಚಿಕರ 'ಸಬ್ಬಸಿಗೆ ಸೊಪ್ಪಿನ ದಾಲ್’

ಸುಲಭವಾಗಿ ಮಾಡಬಹುದು ರುಚಿಕರ ‘ಸಬ್ಬಸಿಗೆ ಸೊಪ್ಪಿನ ದಾಲ್’

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸುಲಭವಾಗಿ ಮಾಡಬಹುದಾದ ಸಬ್ಬಸಿಗೆ ಸೊಪ್ಪಿಗೆ ದಾಲ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು :

2 ಕಟ್ಟು ಸಬ್ಬಸಿಗೆ ಸೊಪ್ಪು , 1/2 ಕಪ್ ಹೆಸರು ಬೇಳೆ, 3- 4 ಹಸಿಮೆಣಸಿನಕಾಯಿ, 1/2 ಸ್ಪೂನ್ ಜೀರಿಗೆ , 1/2 ಸ್ಪೂನ್ ಧನಿಯಾ, 1 ಕಪ್ ತೆಂಗಿನಕಾಯಿ ತುರಿ, 1 ಸ್ಪೂನ್ ಸಾಸಿವೆ, ಇಂಗು, ಕರಿಬೇವು ರುಚಿಗೆ ತಕ್ಕಷ್ಟು ಉಪ್ಪು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ :

ಸಬ್ಬಸಿಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಕುಕ್ಕರಿಗೆ ಹಾಕಿ ಅದಕ್ಕೆ ಹೆಸರುಬೇಳೆ, ಹಸಿಮೆಣಸು ಹಾಕಿ 1 ಕಪ್ ನೀರು ಹಾಕಿ ಕುಕ್ಕರಿನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ. ಬೆಂದ ಬೇಳೆಗೆ ಸ್ವಲ್ಪ ಅರಶಿನ, ಉಪ್ಪು, ತೆಂಗಿನಕಾಯಿ ತುರಿ, ಜೀರಿಗೆ, ಧನಿಯಾ ಸೇರಿಸಿ ರುಬ್ಬಿಕೊಲಳ್ಳಿ, ರುಬ್ಬಿದ ಮಸಾಲೆ ಹಾಕಿ ಕುದಿಸಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಮೇಲೆ ಅದಕ್ಕೆ ಇಂಗು, ಕರಿಬೇವು ಹಾಕಿ ಈ ಒಗ್ಗರಣೆಯನ್ನು ದಾಲ್ ಕುಕ್ಕರಿನ ಮಿಶ್ರಣಕ್ಕೆ ಹಾಕಿದರೆ ರುಚಿಕರವಾದ ಸಬ್ಬಸಿಗೆ ಸೊಪ್ಪಿನ ದಾಲ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular