HomeSpecialಕಣ್ಣು ಕೆಂಪಾಗಿದ್ದರೆ ಅದನ್ನು ನಿವಾರಿಸಲು ಬಳಸಿ ಈ ಮನೆಮದ್ದು

ಕಣ್ಣು ಕೆಂಪಾಗಿದ್ದರೆ ಅದನ್ನು ನಿವಾರಿಸಲು ಬಳಸಿ ಈ ಮನೆಮದ್ದು

ಕಣ್ಣಿಗೆ ಧೂಳು, ಕಸ ಹೋದಾಗ, ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಸೌತೆಕಾಯಿ ಪೀಸ್ ನ್ನು ಕತ್ತರಿಸಿ 10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣಿನ ಕಿರಿಕಿರಿ, ಊತವನ್ನು ಕಡಿಮೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಟೀಯಲ್ಲಿರುವ ಟ್ಯಾನಿಕ್ ಆಮ್ಲ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಟೀ ಬ್ಯಾಗ್ ಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡು ಮಲಗಿ, ಇದರಿಂದ ಕಣ್ಣು ಕೆಂಪಾಗಿದ್ದು ಕಡಿಮೆಯಾಗುತ್ತದೆ.

* ಒಣಗಿದ ಕ್ಯಾಮೊಮೈಲ್ ಹೂಗಳ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಕುದಿಸಿ ಅದನ್ನು ಸೋಸಿ, ತಣ್ಣಗಾದ ಬಳಿಕ ಕಾಟನ್ ಪ್ಯಾಡ್ ನಲ್ಲಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದರಿಂದ ಕಣ್ಣುಗಳಲ್ಲಿನ ತುರಿಕೆ, ಶುಷ್ಕತೆ, ಕೆಂಪಾಗಿದ್ದು ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular